ಬೆಂಗಳೂರು: ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಲಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ಹೆಚ್.ಡಿ.ಕೆ.ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಅವರ ಎಲ್ಲಾ ಮಾತುಗಳನ್ನು ಗಮನಿಸುತ್ತಿದ್ದೇನೆ. ಹಬ್ಬ ಮುಗಿಯಲಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಕೌಂಟರ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಹಿಟ್ & ರನ್ ಮಾಡದೇ ಚರ್ಚೆಗೆ ಬರಲಿ. ಅವರನ್ನೂ ಪಕ್ಕದಲ್ಲಿಯೇ ಕೂರಿಸಿ ಚರ್ಚೆ ಮಾಡೋಣ ಎಂದು ಪಂಥಾಹ್ವಾನ ನೀಡಿದರು.
ಈ ಹಿಂದೆ ಸಾತನೂರಿನಲ್ಲಿ ಟ್ವೆಂಟಿ-ಟ್ವೆಂಟಿ ಪಂದ್ಯ ನಡೆದಿತ್ತು. ಅಸೆಂಬ್ಲಿಗೆ ಕರೆದಿದ್ದೆ. ಆದ್ರೆ ಪಾಪ ಪಾರ್ಲಿಮೆಂಟ್ ಗೆ ಹೋದರು. ಅವರು ಸುಮ್ಮನೇ ನನ್ನ ವಿರುದ್ಧ ಆರೋಪಗಳನ್ನು ಮಾಡುವ ಬದಲು ಚರ್ಚೆಗೆ ಬರಲಿ. ನನ್ನಲ್ಲಿರುವ ಅಗಾಧ ಭಂಡಾರದಿಂದ ಎಲ್ಲಾ ಹೊರತೆಗೀತೀನಿ. ಅವರು ಕೂಡ ಅವರ ಬತ್ತಳಿಕೆಯಲ್ಲಿ ಏನೇನಿದೆ ತೆಗೆಯಲಿ. ಬಹಿರಂಗವಾಗಿ ಕುಳಿತು ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.