ಶೀಘ್ರದಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ: ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

ಗದಗ: ಡಿಸಿಎಂ ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೀಶ್ವರದ ಮುಕ್ತಿ ಮಂದಿರದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಡಿ.ಕೆ.ಶಿವಕುಮಾರ್ ಆದಷ್ಟು ಬೇಗ ಮುಖ್ಯಮಂತ್ರಿಯಾಗಲಿದ್ದಾರೆ. ಅವರನ್ನು ಸಿಎಂ ಮಾಡಿ ಈ ಮುಕ್ತಿಮಂದಿರ ಜಾಗಕ್ಕೆ ಕರೆದುಕೊಂಡು ಬಂದು ತ್ರಿಕೋಟಿ ಲಿಂಗಸ್ಥಾಪನೆ ಮಾಡಿದರು ಎಂದು ನಾಡಿಗೆ ತೋರಿಸೋಣ ಎಂದು ಹೇಳಿದ್ದಾರೆ.

ಲಕ್ಷ್ಮೀಶ್ವರದ ಮುಕ್ತಿ ಮಂದಿರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆ ನೆನೆಗುದಿಗೆ ಬಿದ್ದಿದೆ ಇದಕ್ಕೆಲ್ಲಾ ಕಾರಣ ದುಡ್ಡೆ ದೊಡ್ಡಪ್ಪ. ಲಿಂಗ ಸ್ಥಾಪನೆಗೆ ಸುಮಾರು 15 ಕೋಟಿ ರೂಪಾಯಿಯಾದರೂ ಬೇಕು. ರಾಜಕೀಯ ಮುತ್ಸದ್ದಿ ಶ್ರೀಮಠದ ಮಗನಾದ ಗಂಗಾಧರ ಶಿವಾಚಾರ್ಯರ ಆಶಿರ್ವಾದ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್ ಗಮನಕ್ಕೆ ತ್ರಿಕೋಟಿ ಲಿಂಗ ಸ್ಥಾಪನೆ ಬಗ್ಗೆ ಹೇಳಲಾಗಿದೆ. ವೀರಗಂಗಾಧರ ಜಗದ್ಗುರುಗಳ ಮೇಲೆ ಡಿ.ಕೆ.ಶಿವಕುಮಾರ್ ಅಪಾರ ನಂಬಿಕೆ ಹೊಂದಿದ್ದಾರೆ. ಹಾಗಾಗಿ ಜಗದ್ಗುರುಗಳ ಸಂಕಲ್ಪ ಪೂರ್ಣಗೊಳಿಸೋಣ. ಡಿಸಿಎಂ ಅವರನ್ನು ಸಿಎಂ ಮಾಡಿ ತ್ರಿಕೋಟಿ ಲಿಂಗ ಸ್ಥಾಪನೆ ಮಾಡಿದರು ಎಂದು ನಾಡಿಗೆ ತಿಳಿಸೋಣ ಎಂದು ಹೇಳಿದರು.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read