ಬೆಂಗಳೂರು: ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ-ಜಾತಿ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗಳ ಅನಗತ್ಯ ಪ್ರಶ್ನೆಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ. ನಿಮಗೆ ಏನು ಉತ್ತರ ಕೊಡಬೇಕೋ ಅದಕ್ಕಷ್ಟೇ ಉತ್ತರ ಕೊಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಮೀಕ್ಷೆ ಸಿಬ್ಬಂದಿಗಳು ಬೆಂಗಳೂರಿಗರಿಗೆ ವೈಯಕ್ತಿಕವಾಗಿ ಪ್ರಶ್ನೆ ಕೇಳಬೇಡಿ. ಕುರಿ, ಕೋಳಿ, ದನ, ಕರು ಎಷ್ಟಿದೆ? ಎಷ್ಟು ವಾಚ್, ಎಷ್ಟು ಚಿನ್ನ, ಎಷ್ಟು ಫ್ರಿಡ್ಜ್ ಇದೆ? ಎಂದು ಕೇಳಬೇಡಿ. ಇದೆಲ್ಲ ಅವರ ಪರ್ಸನಲ್ ವಿಚಾರ ಅದೆನ್ನೆಲ್ಲ ಬಿಟ್ಟುಬಿಡಿ ಎಂದು ಸೂಚಿಸಿದರು.
ಇನ್ನು ಜನರು ನಿಮಗೆ ಏನು ಉತ್ತರ ಕೊಡಬೇಕೋ ಅದಕ್ಕೆ ಮಾತ್ರ ಉತ್ತರ ಕೊಡಿ. ಉತ್ತರ ಕೊಡಬಾರದು ಎನಿಸುದರೆ ಕೊಡಬಾರದು. ಆದರೆ ಯಾರೂ ಸಮೀಕ್ಷೆಯಲ್ಲಿ ಭಾಗವಹಿಸದೇ ಇರಬೇಡಿ. ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಲು. ಕೋರ್ಟ್ ಹೇಳಿದೆ ಏನು ಬೇಕೋ ಅದಕ್ಕೆ ಮಾತ್ರ ಉತ್ತರ ಕೊಡಿ. ಸಮೀಕ್ಷೆ ವೀರೋಧ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.