ಚೆನ್ನೈ: ಕಳೆದ ತಿಂಗಳು ಅಕ್ಟೋಬರ್ ನಲ್ಲಿ ಮೋಂಥಾ ಸೈಕ್ಲೋನ್ ಗೆ ಸಾಕ್ಷಿಯಾಗಿದ್ದ ಬಂಗಾಳಕೊಲ್ಲಿಯಲ್ಲಿ ಸೆನ್ಯಾರ್ ಹೆಸರಿನ ಚಂಡಮಾರುತ ಭೀತಿ ಉಂಟಾಗಿದೆ. ಇದರಿಂದ ನವೆಂಬರ್ 27 ರವರೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಸಮೀಪ ಮಲಕ್ಕಾ ಜಲಸಂಧಿ ಬಳಿ ವಾಯುಭಾರ ಕುಸಿತ ಉಂಟಾಗಿದೆ. ಇದು ತೀವ್ರ ಸ್ವರೂಪ ಪಡೆದುಕೊಂಡು ಚಂಡಮಾರುತವಾಗಿ ಬದಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ವೇಳೆ ಚಂಡಮಾರುತ ರೂಪಗೊಂಡಲ್ಲಿ ಅದಕ್ಕೆ ಸೆನ್ಯಾರ್(ಸಿಂಹ) ಹೆಸರಿಡಲಾಗುವುದು. ಹಲವು ರಾಜ್ಯಗಳಲ್ಲಿ ನವೆಂಬರ್ 27ರವರೆಗೆ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಹಿಂದೂ ಮಹಾಸಾಗರ ವೃತ್ತದಲ್ಲಿರುವ ಯುಎಎ ಈ ಬಾರಿ ಚಂಡಮಾರುತಕ್ಕೆ ಹೆಸರಿಡುವ ಅವಕಾಶ ಹೊಂದಿದ್ದು, ಚಂಡಮಾರುತಕ್ಕೆ ಸೆನ್ಯಾರ್ ಎಂದು ಹೆಸರಿಸಿದೆ.
