Cyber fraud : ಅಪರಿಚಿತ ಕರೆಗಳನ್ನು ಸ್ವೀಕರಿಸುವ ಮುನ್ನ ತಪ್ಪದೇ ಈ ಸುದ್ದಿ ಓದಿ!

ಹಾವೇರಿ : ಅಪರಿಚಿತ ಕರೆಗಳನ್ನು ಸ್ವೀಕರಿಸುವ ಮುನ್ನ ಜಾಗುರಕರಾಗಿರುವುದು ಒಳಿತು. ಇಲ್ಲದಿದ್ದರೆ ಸೈಬರ್ ವಂಚಕರು ನಿಮಗೆ ಮೋಸ ಮಾಡಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಖಾಲಿಮಾಡಬಹುದು.

ಹೌದು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ ಭಾಸ್ಕರ್ ಅವರಿಗೆ ಅಪರಿಚಿತನೊಬ್ಬ ಕರೆ ಮಾಡಿ, ನಾನು ಧಾರವಾಡದ ಎಸ್ ಬಿಐ ಬ್ಯಾಂಕ್ ಉದ್ಯೋಗಿ ನವೀನ್ ಕುಮಾರ್, ನಿಮ್ಮ  ಫೋನ್ ಪೇ ಗೆ ಒಂದು ದಿನದ ವಹಿವಾಟು ಮಿತಿ 60 ಸಾವಿರ ಇದೆ. ಇದನ್ನು ಮುಂದುವರೆಸಲು ನೀವು ನಿಮ್ಮ ಫೋನ್ ಪೇ ನಲ್ಲಿ ಬರುವ ಲಿಂಕ್ ನ್ನು ಕ್ಲಿಕ್ ಮಾಡಿ ಎಸ್ ಎಂದು ಟೈಪ್ ಮಾಡಿ ಎಂದು ನಂಬಿಸಿದ್ದಾನೆ.

ಇದನ್ನು ಭಾಸ್ಕರ್ ಅವರು ಫೋನ್ ಪೇ ನಲ್ಲಿರುವ ಲಿಂಕ್ ಮಾಡಿ ಎಸ್ ಎಂದು ರಿಪ್ಲೈ ಮಾಡಿದ್ದಾರೆ. ಕೂಡಲೇ ತಮ್ಮ ಖಾತೆಯಲ್ಲಿದ್ದ 60 ಸಾವಿರ ರೂ.ಹಣ ಡೆಬಿಟ್ ಆಗಿದೆ ಎಂದು ಮೆಸೇಜ್ ಬಂದಿದೆ. ಬಳಿಕ ವಂಚನೆಯಾಗಿರುವುದು ಖಚಿತವಾದ ಬಳಿಕ ಕುಲಪತಿಗಳು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read