BIG NEWS: ಸೈಬರ್ ವಂಚನೆ ಬಗ್ಗೆ ಜಾಗೃತರಾಗಿರಿ; ಡಿಜಿಟಲ್ ಅರೆಸ್ಟ್ ಎಂಬ ಕಾನೂನು ಇಲ್ಲ; ಎಚ್ಚರವಹಿಸುವಂತೆ ಜನತೆಗೆ ಪ್ರಧಾನಿ ಮೋದಿ ಕರೆ

ನವದೆಹಲಿ: ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಎಚ್ಚರವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ಕರೆ ನೀಡಿದ್ದಾರೆ.

115ನೇ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ವಿಜಯಪುರದ ವ್ಯಕ್ತಿಯೋರ್ವರಿಗೆ ಸೈಬರ್ ವಂಚಕರು ಕರೆ ಮಾಡಿ ವಂಚಿಸಲು ಯತ್ನಿಸಿದ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. ಆನ್ ಲೈನ್ ಮೂಲಕ ಯಾವ ರೀತಿ ವಂಚನೆಗಳು ನಡೆಯುತ್ತಿವೆ ಎಂಬುದನ್ನು ವಿವರಿಸಿದ್ದಾರೆ. ಪೊಲೀಸ್ ಅಥವಾ ತನಿಖಾ ಸಂಸ್ಥೆಗಳ ಹೆಸರಲ್ಲಿ ಕರೆ ಮಾಡಿ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಅಕೌಂಟ್ ಗಳ ಬಗ್ಗೆ ಮಾಹಿತಿ ಕೇಳಬಹುದು. ಹಾಗೆ ಕೇಳಿದಾಗ ಮಾಹಿತಿ ನೀಡದಿದ್ದರೆ ಡಿಜಿಟಲ್ ಅರೆಸ್ಟ್ ಆಗಿದ್ದಾರೆ ಎಂದು ಹೇಳುತ್ತಾರೆ. ಕಾನೂನಿನಲ್ಲಿ ಡಿಜಟಲ್ ಅರೆಸ್ಟ್ ಎಂಬ ಯಾವುದೆ ವ್ಯವಸ್ಥೆ ಇಲ್ಲ. ಕ್ರಿಮಿನಲ್ ಗ್ಯಾಂಗ್ ಗಳು ಸುಳ್ಳು ಹೇಳಿ ನಕಲಿ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕಾಲ್, ಫೋನ್ ಕಾಲ್ ಮಾಡಿದರೆ ಭಯಪಡುವ ಅಗತ್ಯವಿಲ್ಲ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಪೊಲೀಸ್, ಸಿಬಿಐ, ನಾರ್ಕೊಟಿಕ್ಸ್, ಆರ್ ಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಫೋನ್ ಮಾಡಬಹುದು. ನಿಮ್ಮ ವೈಯಕ್ತಿಕ ಜೀವನದ ಮಾಹಿತಿಗಳನ್ನು ಪತ್ತೆ ಮಾಡಿ, ನಿಮ್ಮ ವಿರುದ್ಧ ಕೇಸ್ ದಾಖಲಾಗುತ್ತದೆ ಎಂದು ಹೆದರಿಸಬಹುದು. ಯಾವ ತನಿಖಾ ಏಜೆನ್ಸಿಯೂ ಫೋನ್ ನಲ್ಲಿ ವಿಡಿಯೋ ಕಾಲ್ ಅಥವಾ ಇತ್ಯಾದಿ ಕರೆ ಮಾಡುವುದಿಲ್ಲ. ಈ ರೀತಿ ಕರೆ ಮಡಿ ಹಣಕಾಸು ಮಾಹಿತಿ, ವಿವರ ಕೇಳಿದರೆ ಎಚ್ಚರ ವಹಿಸಿ.

ಸೈಬರ್ ಕ್ರೈಂ ಹೆಲ್ಪ್ ಲೈನ್ ಸಂಖ್ಯೆ 1930 ಹಾಗೂ cybercrime.gov.in ವೆಬ್ ಸೈಟ್ ಗೆ ದೂರು ನೀಡಿ. #SaveDigitalindia ಅನ್ನೋ ಹ್ಯಾಷ್ ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತೆ ಮೂಡಿಸಿ ಎಂದು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read