Cute Video : ಮೋದಿ ಸ್ವಾಗತದ ವೇಳೆ ಘಾಗ್ರಾ ಧರಿಸಿ ಭಾಂಗ್ರಾ ನೃತ್ಯ ಮಾಡಿದ ರಷ್ಯಾ ಬಾಲಕಿ

ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾಸ್ಕೋಗೆ ತೆರಳಿದ್ದಾರೆ. ಮೋದಿ ರಷ್ಯಾಗೆ ಬಂದಿಳಿಯುತ್ತಿದ್ದಂತೆ ಅವರಿಗೆ ನೀಡಲಾದ ಸ್ವಾಗತ ಎಲ್ಲರ ಗಮನ ಸೆಳೆದಿದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪ್ರಧಾನಿ ನರೇಂದ್ರ ಮೋಸಿ ಅವರನ್ನು ಸ್ವಾಗತಿಸಲು ರಷ್ಯಾದ ಹುಡುಗಿಯೊಬ್ಬಳು ಭಾರತೀಯ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಭಾಂಗ್ರಾ ಪ್ರದರ್ಶಿಸಿದ್ದಾಳೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಇಷ್ಟಪಟ್ಟಿದ್ದಾರೆ. ಉಕ್ರೇನ್ ಯುದ್ಧದ ನಂತರ ಪ್ರಧಾನಿ ಮೋದಿ ರಷ್ಯಾಕ್ಕೆ ಮೊದಲ ಬಾರಿ ಭೇಟಿ ನೀಡಿದ್ದು, ಅವರನ್ನು ಮಾಸ್ಕೋದಲ್ಲಿ ಉಪ ಪ್ರಧಾನಿ ಡೆನಿಸ್ ಮಾಂಟುರೊವ್ ಸ್ವಾಗತಿಸಿದರು.

ಈ ಸಮಯದಲ್ಲಿ ಭಾರತದ ಸಾಂಪ್ರದಾಯಿಕ ಉಡುಗೆ ಧರಿಸಿದ ಯುವಕ – ಯುವತಿಯರು ಭಾಂಗ್ರಾ ಪ್ರದರ್ಶಿಸಿದ್ರು. ಈ ಸಮಯದಲ್ಲಿ ಪುಟ್ಟ ಬಾಲಕಿಯೊಬ್ಬಳ ಡಾನ್ಸ್‌ ಎಲ್ಲರ ಗಮನ ಸೆಳೆದಿದೆ. ರಷ್ಯಾದ ಯುವತಿಯೊಬ್ಬಳು, ಭಾರತೀಯ ಉಡುಗೆಯನ್ನು ಧರಿಸಿ, ಭಾಂಗ್ರಾ ಪ್ರದರ್ಶಿಸಿದಳು ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ಚಿಕ್ಕ ಹುಡುಗಿ ಹಳದಿ ಮತ್ತು ಕೆಂಪು ಘಾಗ್ರಾ ಚೋಲಿಯನ್ನು ಧರಿಸಿ ಭಾಂಗ್ರಾ ನೃತ್ಯ ಮಾಡಿದ್ದಾಳೆ.

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ವೈರಲ್ ಆಗಿದ್ದು, 1.62 ಲಕ್ಷಕ್ಕೂ ಹೆಚ್ಚು ವೀವ್ಸ್‌ ಸಿಕ್ಕಿದೆ. 8,000 ಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಬಹಳ ಸುಂದರ, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್.  ವಂದೇ ಮಾತರಂ, ಕ್ಯೂಟ್‌ನೆಸ್ ಓವರ್‌ಲೋಡ್ ಹೀಗೆ ಅನೇಕ ಕಮೆಂಟ್‌ ಗಳು ಬಂದಿವೆ.

https://twitter.com/ANI/status/1810291437642125812?ref_src=twsrc%5Etfw%7Ctwcamp%5Etweetembed%7Ctwterm%5E1810291437642125812%7Ctwgr%5E49af3b68c8e8fab7377040f6730c61fe632c0e54%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnewsnineeng-epaper-dhfc063adcceaa4f4799aee937999624d2%2Fcutenessoverloadedlittlerussiangirlperformsbhangratowelcomepmmodiviralvideo-newsid-n621412747

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read