ಬೆಂಗಳೂರು : ಬೆಂಗಳೂರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚಣೆ ನಡೆಸಿ 14 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. ಕಳೆದ 18 ದಿನಗಳಲ್ಲಿ 14 ಕೋಟಿ 22 ಲಕ್ಷ ಮೌಲ್ಯದ ಗಾಂಜಾ , ಇ ಸಿಗರೇಟ್ , ಪ್ರಾಣಿಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಗಾಂಜಾ ಜಪ್ತಿ ಮಾಡಲಾಗಿದೆ.
ವಿದೇಶದಿಂದ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ 10 ಮಂದಿ ಆರೋಪಿಗಳಿಂದ 38.64 ಕೆಜಿ ಗಾಂಜಾ ಸೀಜ್ ಮಾಡಿಕೊಂಡಿದ್ದಾರೆ. ಅಲ್ಲದೇ 2.38 ಲಕ್ಷ ಮೌಲ್ಯದ ಇ ಸಿಗರೇಟ್, ವಿವಿಧ ಪ್ರಾಣಿಗಳನ್ನ ಕೂಡ ಸಾಗಿಸಲಾಗುತ್ತಿತ್ತು.ಏರ್ ಪೋರ್ಟ್ ನಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುವಾಗ ಡ್ರಗ್ಸ್, ಮತ್ತಿತರರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
