ವಿದ್ಯುತ್ ಗ್ರಾಹಕರೇ ಗಮನಿಸಿ: ಹೊಸ ತಂತ್ರಾಂಶ ಅಳವಡಿಕೆ ಹಿನ್ನೆಲೆ 3 ದಿನ ಬೆಸ್ಕಾಂ ಸೇವೆ ಇರಲ್ಲ

ಬೆಂಗಳೂರು: ಹೊಸ ತಂತ್ರಾಂಶ ಅಳವಡಿಕೆ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮೂರು ದಿನ ಬೆಸ್ಕಾಂ ಸೇವೆ ಇರುವುದಿಲ್ಲ.

ಬೆಸ್ಕಾಂ ಗ್ರಾಮಾಂತರ ಪ್ರದೇಶಗಳಲ್ಲಿ ಸಮಗ್ರ ಕಂದಾಯ ನಿರ್ವಹಣಾ ಹೊಸ ತಂತ್ರಾಂಶ ಅಳವಡಿಕೆ ಕಾರ್ಯ ಕೈಗೊಳ್ಳಲಾಗಿದೆ. ಈ ಕಾರಣದಿಂದ ಜನವರಿ 30 ರಿಂದ ಫೆಬ್ರವರಿ 1ರವರೆಗೆ ಮೂರು ದಿನಗಳ ಕಾಲ ಬಿಲ್ಲಿಂಗ್, ಹೊಸ ಸಂಪರ್ಕ, ತಂತ್ರಾಂಶ ಆಧಾರಿತ ಸೇವೆಗಳು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಬೆಸ್ಕಾಂ ವ್ಯಾಪ್ತಿಯ ಉಳಿದ 7 ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಕಂದಾಯ ಸಂಗ್ರಹ ಹೊರತುಪಡಿಸಿ ತಂತ್ರಾಂಶ ಆಧಾರಿತ ಸೇವೆಗಳಲ್ಲಿ ವ್ಯತ್ಯಯವಾಗುತ್ತದೆ ಎಂದು ಬೆಸ್ಕಾಂನಿಂದ ಮಾಹಿತಿ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read