SHOCKING: ಐಸ್ ಕ್ರೀಂನಲ್ಲಿ ಹರಿದಾಡುತ್ತಿದ್ದ ಹುಳ ಕಂಡು ಬೆಚ್ಚಿಬಿದ್ದ ಗ್ರಾಹಕ: ವಿಡಿಯೋ ವೈರಲ್

ಲಖ್ನೋ: ಲಖ್ನೋದ ಪ್ರತಿಷ್ಠಿತ ಲುಲು ಮಾಲ್‌ನಲ್ಲಿ ಗ್ರಾಹಕರೊಬ್ಬರು ತಮ್ಮ ಕುಲ್ಫಿ ಫಲೂದಾದಲ್ಲಿ ಹುಳುವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

ಗ್ರಾಹಕ ಮಾಲ್ ಆವರಣದಲ್ಲಿರುವ ‘ಫಲೂಡಾ ನೇಷನ್’ ಔಟ್‌ ಲೆಟ್‌ ನಿಂದ ಫಲೂದಾ ಖರೀದಿಸಿದ್ದಾರೆ. ಅನಿರೀಕ್ಷಿತವಾಗಿ ಅದರಲ್ಲಿ ಹುಳ ಕಂಡು ಬಂದಿದ್ದರಿಂದ ಗ್ರಾಹಕರು ಕುಲ್ಫಿ ಕೌಂಟರ್‌ನಲ್ಲಿರುವ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ಆಗ ವೈರಲ್ ದೃಶ್ಯಗಳನ್ನು ಚಿತ್ರಿಸಲಾಗಿದೆ. ತನಗೆ ಫಲೂದಾ ಕೊಟ್ಟ ಉದ್ಯೋಗಿಯ ಹೆಸರನ್ನು ವಿಚಾರಿಸಲು ಗ್ರಾಹಕರು ಮಾಡಿದ ಪ್ರಯತ್ನಗಳನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಆದಾಗ್ಯೂ, ಉದ್ಯೋಗಿ ಮೌನವಾಗಿದ್ದರು. ಗ್ರಾಹಕರ ನಿರಂತರ ಪ್ರಶ್ನೆಯ ಹೊರತಾಗಿಯೂ ಅವರ ಹೆಸರನ್ನು ಬಹಿರಂಗಪಡಿಸಲಿಲ್ಲ.

ಸಿಬ್ಬಂದಿ ಬದಲಿ ಫಲೂದಾ ಕೊಡಲು ಮುಂದಾಗಿದ್ದು, ಗ್ರಾಹಕರು ಸ್ವೀಕರಿಸಲು ನಿರಾಕರಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಆದರೆ, ಸಿಬ್ಬಂದಿ ಬದಲಿ ಐಸ್ ಕ್ರೀಂ ಕೊಡುವುದಾಗಿ ಹೇಳಿದ್ದಾರೆ. ಆದರೆ, ಗ್ರಾಹಕನು ತನ್ನ ಹಣ ಮರುಪಾವತಿಸುವಂತೆ ಪಟ್ಟು ಹಿಡಿದಾಗ ಅಂತಿಮವಾಗಿ, ಔಟ್ಲೆಟ್ ಒಪ್ಪಿಗೆ ನೀಡಿ ಗ್ರಾಹಕನ ಹಣ ಹಿಂದಿರುಗಿಸಿದೆ.

ಈ ವಿಡಿಯೋ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಗ್ರ್ಯಾಂಡ್ ಲುಲು ಮಾಲ್‌ನಲ್ಲಿರುವ ಫಲೂಡಾ ನೇಷನ್‌ನ ಐಸ್‌ಕ್ರೀಂನಲ್ಲಿ ಹುಳ ಕಂಡುಬಂದಿದೆ. ಫಲೂದಾ ನೇಷನ್ ಸ್ಟೋರ್ ಮ್ಯಾನೇಜರ್ ಅವಧಿ ಮುಗಿದ ಐಸ್ ಕ್ರೀಮ್ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ವೈರಲ್ ವೀಡಿಯೊ ವೀಕ್ಷಿಸಿದ ಹಲವಾರು ಆನ್‌ಲೈನ್ ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಆತಂಕ, ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ.

https://twitter.com/1947_nitin/status/1773257663922467109

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read