ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ ಯುಜಿ 2023) ಫಲಿತಾಂಶಗಳನ್ನು ಆಗಸ್ಟ್ ಎರಡನೇ ವಾರದಲ್ಲಿ ಪ್ರಕಟಿಸಲಿದೆ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.
ಸುಮಾರು 14 ಲಕ್ಷ ವಿದ್ಯಾರ್ಥಿಗಳು ಸಿಯುಇಟಿ ಫಲಿತಾಂಶ 2023 ಗಾಗಿ ಕುತೂಹಲದಿಂದ ಕಾಯುತ್ತಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಆಗಸ್ಟ್ ಎರಡನೇ ವಾರದೊಳಗೆ ಅಂತಿಮ ಫಲಿತಾಂಶಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಕುಮಾರ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಒಟ್ಟು 156 ಪ್ರಶ್ನೆಗಳನ್ನು ಕೈಬಿಡುವ ಪರಿಷ್ಕೃತ ತಾತ್ಕಾಲಿಕ ಕೀ ಉತ್ತರವನ್ನು ಜುಲೈ 3 ರಂದು ಸಿಯುಇಟಿ ಯುಜಿ 2023 ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ ಮತ್ತು ಹಿಂದಿ ಪರೀಕ್ಷೆಯ ಕೆಲವು ಶಿಫ್ಟ್ಗಳ ಕೀ ಉತ್ತರಗಳಲ್ಲಿ ಎನ್ ಟಿ ಎ ಬದಲಾವಣೆಗಳನ್ನು ಮಾಡಿದೆ. ಸಿಯುಇಟಿ ಯುಜಿ 2023 ಪರೀಕ್ಷೆಯನ್ನು ಮೇ 21 ರಿಂದ ಜೂನ್ 23 ರವರೆಗೆ ನಡೆಸಲಾಗಿತ್ತು.
https://twitter.com/mamidala90/status/1676266953248317442?ref_src=twsrc%5Etfw%7Ctwcamp%5Etweetembed%7Ctwterm%5E1676266953248317442%7Ctwgr%5E430fac815d1dedbf420937fc389b1bbe64d0d378%7Ctwcon%5Es1_&ref_url=https%3A%2F%2Ftv9kannada.com%2Feducation%2Fcuet-ug-2023-results-expected-in-second-week-of-august-confirms-ugc-chief-nsp-616106.html