ಬಿಜೆಪಿಯೊಳಗಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಸಿ.ಟಿ. ರವಿ: ಚುನಾವಣೆ ಬಳಿಕ ಸಿಡಿಯಲಿದೆ ಬಾಂಬ್

ಚಿಕ್ಕಮಗಳೂರು: ಬಿಜೆಪಿಯೊಳಗಿನ ಬೆಳವಣಿಗೆಗಳಿಂದ ಮಾಜಿ ಸಚಿವ ಸಿ.ಟಿ. ರವಿ ಅಸಮಾಧಾನಗೊಂಡಿದ್ದಾರೆ. ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಮನದಲ್ಲಿ ಬಹಳ ಭಾವನೆಗಳು ಇವೆ. ಹೇಳಲು ಬಹಳ ಇದೆಯಾದರೂ ಸಮಯ ಇದಲ್ಲ ಎಂದು ಚಿಕ್ಕಮಗಳೂರು ನಗರದಲ್ಲಿ ರವಿ ಹೇಳಿದ್ದಾರೆ.

ಸದ್ಯಕ್ಕೆ ದೇಶದ ಹಿತಕ್ಕಾಗಿ ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಅಷ್ಟೇ. ಪಕ್ಷ ಹಾಗೂ ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನು ನುಂಗಿಕೊಂಡಿದ್ದೇನೆ. ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ. ಸಮಯ ಬರಲಿ ಎಲ್ಲವನ್ನು ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡುವುದಾದರೆ ಚುನಾವಣೆಯ ನಂತರವೇ. ವಿಧಾನಸಭೆ ಚುನಾವಣೆಯಲ್ಲಿ ಯಾರು ಹೇಗೆ ನಡೆದುಕೊಂಡರು ಎಂದು ಹೇಳುತ್ತೇನೆ. ಚುನಾವಣೆ ಬಳಿಕ ಬಹಳ ವಿಷಯಗಳು ಹೇಳಲು ಇವೆ. ಈಗ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದೊಂದೇ ಗುರಿ ಇರುವುದು. 28 ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು. ಅದಕ್ಕೆ ಅಳಿಲು ಸೇವೆ ಮಾಡುವುದಷ್ಟೇ ಕೆಲಸ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read