ಚಿಕ್ಕೋಡಿ: ನಾನು ಮತ್ತು ಯತ್ನಾಳ್ ಅವರಂತಹವರು ರಾಜಕೀಯಕ್ಕೆ ಬಂದಿದ್ದು ಹಿಂದುತ್ವಕ್ಕಾಗಿ ಎಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ, ಬಿಜೆಪಿ ಸಮಾವೇಶದಲ್ಲಿ ಸಿ.ಟಿ. ರವಿ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿಯನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ಭಾರತ್ ಮಾತಾ ಕಿ ಜೈ ಅನ್ನೋದಕ್ಕೂ ಅನುಮತಿ ಪಡೆಯುವ ಪರಿಸ್ಥಿತಿ ಬಂದಿದೆ. ಭಾರತ್ ಮಾತಾ ಕೀ ಜೈ ಎನ್ನಲು ಎಐಸಿಸಿ ಅಧ್ಯಕ್ಷರಿಂದ ಅನುಮತಿ ಪಡೆಯುವ ಪರಿಸ್ಥಿತಿ ಲಕ್ಷ್ಮಣ ಸವದಿಗೆ ಬಂದಿದೆ ಎಂದು ಹೇಳಿದ್ದಾರೆ.
ಜಾತಿ ರಾಜಕಾರಣದಿಂದ ದೇಶ ಗೆಲ್ಲುವುದಿಲ್ಲ. ನೀತಿ ರಾಜಕಾರಣದಿಂದ ದೇಶ ಗೆಲ್ಲುತ್ತದೆ. ಕಾಂಗ್ರೆಸ್ ನೀತಿಗೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಸಿ.ಟಿ. ರವಿ ಟೀಕಿಸಿದ್ದಾರೆ.