ನವದೆಹಲಿ: ಲೆಜೆಂಡರಿ ಚೆನ್ನೈ ಸೂಪರ್ ಕಿಂಗ್ಸ್(CSK) ವಿಕೆಟ್‌ಕೀಪರ್, ಬ್ಯಾಟರ್ ಎಂ.ಎಸ್. ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 18 ನೇ ಸೀಸನ್‌ಗೆ ಮರಳಲಿದ್ದಾರೆ ಎಂದು ಸಿಎಸ್‌ಕೆ ದೃಢಪಡಿಸಿದೆ.
2024ರಲ್ಲಿ ಧೋನಿ ಆಡುತ್ತಾರೆಯೇ, ಇಲ್ಲವೇ ಎಂದು ಅಭಿಮಾನಿಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಇದೀಗ ಸ್ಪಷ್ಟನೆ ಸಿಕ್ಕಂತಾಗಿದೆ. ಅಭಿಮಾನಿಗಳ ಪ್ರೀತಿಯ ತಲೈವ ಧೋನಿ ಇನ್ನೂ ಒಂದು ಋತುವಿಗಾಗಿ ಆಡಲು ಹಿಂತಿರುಗಿರುವುದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತಮ್ಮ ಅಭಿಮಾನಿಗಳನ್ನು ಆಕರ್ಷಿಸಲು ಧೋನಿ ಮರಳಿದ್ದಾರೆ.
ಕೆಲ ಋತು ಹೊರತಾಗಿ ಪಂದ್ಯಾವಳಿಯ ಆರಂಭದಿಂದಲೂ ಧೋನಿ CSK ಗಾಗಿ ಆಡುತ್ತಿದ್ದಾರೆ. CSK 2010, 2011, 2018, 2021 ಮತ್ತು 2023 ರಲ್ಲಿ ಐದು ಐಪಿಎಲ್ ಪ್ರಶಸ್ತಿಗಳನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ಅವರದ್ದಾಗಿದೆ.