ಫುಲ್ ಟೈಟಾಗಿ ಹಾರುವುದನ್ನೇ ಮರೆತು ಗೋಡೆಗೆ ಡಿಕ್ಕಿ ಹೊಡೆದ ಕಾಗೆ | ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ಹರಿದಾಡುವುದು ಹೊಸದೇನಲ್ಲ. ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದೆ. ಕಾಗೆಯೊಂದು ಫುಲ್ ಟೈಟಾಗಿ ಹಾರುವುದನ್ನೇ ಮರೆತು ಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ವಿಡಿಯೋ ಜಾಲತಾಣದಲ್ಲಿ ಹರಿದಾಡಿದೆ.

ವಿಡಿಯೋದಲ್ಲಿ ಹಾರುತ್ತಾ ಬಂದು ಟೇಬಲ್ ಮೇಲೆ ಕಾಗೆ ಕುಳಿತುಕೊಳ್ಳುತ್ತದೆ. ಗ್ಲಾಸ್ ನಲ್ಲಿ ಅದಕ್ಕೆ ವ್ಯಕ್ತಿಯೊಬ್ಬ ಮದ್ಯ ಹಾಕುತ್ತಾನೆ. ಗ್ಲಾಸ್ ನಲ್ಲಿದ್ದ ಮದ್ಯ ಕುಡಿದು ಕಾಗೆ ಅಲ್ಲಿಂದ ಹಾರುತ್ತದೆ. ಆದರೆ, ಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತದೆ. ಈ ವಿಡಿಯೋವನ್ನು ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. 50,800ಕ್ಕೂ ಅಧಿಕ ಲೈಕ್ಸ್ ಬಂದಿವೆ.

ವಿಡಿಯೋ ಗಮನಿಸಿದ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಕಾಗೆ ಮದ್ಯ ಸೇವಿಸುವ ವಿಡಿಯೋ ಹಳೆಯದು ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಹೇಳಿದ್ದು, ಇನ್ನೊಬ್ಬರು ಇದು ಎಡಿಟ್ ಮಾಡಿದ ವಿಡಿಯೋ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://www.instagram.com/p/C-0YbgeyiOj/?utm_source=ig_embed&utm_campaign=embed_video_watch_again

https://www.instagram.com/reel/C-0YbgeyiOj/?utm_source=ig_web_copy_link

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read