BIG NEWS: ಕ್ರಿಕೆಟಿಗ ಸಲೀಲ್ ಅಂಕೋಲಾ ತಾಯಿಯ ಬರ್ಬರ ಹತ್ಯೆ; ಕತ್ತು ಸೀಳಿದ ರೀತಿಯಲ್ಲಿ ಶವ ಪತ್ತೆ

ಪುಣೆ: ಮಾಜಿ ಕ್ರಿಕೆಟಿಗ, ನಟ ಸಲೀಲ್ ಅಂಕೋಲಾ ಅವರ ತಾಯಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಕತ್ತು ಸೀಳಿದ ರೀತಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮಾಲಾ ಅಶೋಕ್ ಅಂಕೋಲಾ (77) ಮೃತರು. ಮಾಲಾ ಅಂಕೋಲಾ ಅವರ ಮೃತದೇಹವು ಪುಣೆಯ ಡೆಕ್ಕನ್ ಜಿಮ್ಖಾನಾ ಪ್ರದೇಶದ ಪ್ರಭಾತ್ ರಸ್ತೆಯಲ್ಲಿರುವ ಅವರ ಫ್ಲಾಟ್‌ನಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಕೆಲಸದವಳು ಫ್ಲಾಟ್ ಗೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆ ಕೆಲಸದವಳು ಮನೆಗೆ ಬಂದಾಗ ಬಾಗಿಲು ತೆರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದು ನೋಡಿದಾಗ ಮಾಲಾ ಅಂಕೋಲಾ ಕತ್ತು ಸೀಳಿದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೇಲ್ನೋಟಕ್ಕೆ, ಗಾಯಗಳು ಸ್ವಯಂ ಪ್ರೇರಿತವಾಗಿದ್ದಂತೆ ಕಂಡುಬರುತ್ತಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಡೆಪ್ಯುಟಿ ಪೊಲೀಸ್ ಆಯುಕ್ತ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.

ವೇಗದ ಮಧ್ಯಮ ಬೌಲರ್ ಆಗಿದ್ದ ಸಲೀಲ್ ಅಂಕೋಲಾ ಅವರು 1989 ಮತ್ತು 1997 ರ ನಡುವೆ ಒಂದು ಟೆಸ್ಟ್ ಸರಣಿ ಮತ್ತು 20 ODIಗಳನ್ನು ಆಡಿದದ್ದರು. ಬಳಿಕ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಲು ಆರಂಭಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read