ಈ ಸಿಇಒ ತಿಂಗಳ ಸಂಬಳ 15 ಸಾವಿರ ರೂ. ಎಂದರೆ ನೀವು ನಂಬಲೇಬೇಕು….!

ವಿಶ್ವದ ಟಾಪ್ ಗ್ರೇಡ್ ಸಿಇಒಗಳ ಸಂಬಳ ವರ್ಷಕ್ಕೆ 50 ಕೋಟಿ ರೂ.ಗಿಂತಲೂ ಅಧಿಕ ಇರುತ್ತದೆ. ಭಾರತದಲ್ಲಿ ಇನ್ಫೋಸಿಸ್ ಸಿಇಒ ಸಂಬಳ 71 ಕೋಟಿ ರೂ. ಇಂತಹ ಸ್ಥಿತಿಯಲ್ಲಿ ಉದಯೋನ್ಮುಖ ಎನಿಸಿರುವ ಸ್ಟಾರ್ಟಪ್​ವೊಂದರ ಸಿಇಒ ಸಂಬಳ ಕೇಳಿದರೆ ನೀವು ನಂಬಲು ಸಾಧ್ಯವೇ ಇಲ್ಲ.

ಕ್ರೆಡ್ ಆ್ಯಪ್ ಹೆಸರು ಪ್ರಸಿದ್ಧವಾಗಿದೆ. ಇದರ ಕಂಪೆನಿಯ ಸಿಇಒ ಕುನಾಲ್ ಷಾ ಸಂಬಳ ತಿಂಗಳಿಗೆ ಕೇವಲ 15 ಸಾವಿರ ರೂ. ಅಂದರೆ ವರ್ಷಕ್ಕೆ 2 ಲಕ್ಷ ರೂಗಿಂತಲೂ ಕಡಿಮೆ. ಕ್ರೆಡ್ ಎಂಬುದು ಕ್ರೆಡಿಟ್ ಕಾರ್ಡ್​ಗಳ ಪೇಮೆಂಟ್ ಪ್ಲಾಟ್​ಫಾರ್ಮ್ ಆಗಿದೆ. ಎಲ್ಲಾ ರೀತಿಯ ಕ್ರೆಡಿಟ್ ಕಾರ್ಡ್​ಗಳ ಬಿಲ್​ಗಳನ್ನು, ಎಲೆಕ್ಟ್ರಿಕ್ ಇತ್ಯಾದಿ ವಿವಿಧ ಬಗೆಯ ಬಿಲ್​ಗಳನ್ನು ಕ್ರೆಡ್​ನಲ್ಲಿ ಕಟ್ಟಬಹುದು. ಇಲ್ಲಿ ಬಿಲ್ ಪಾವತಿಗೆ ಇಂತಿಷ್ಟು ರಿಟರ್ನ್ಸ್ ಸಿಗುತ್ತದೆ. ಈ ಕಾರಣಕ್ಕೆ ಕ್ರೆಡ್ ಬಹಳ ಜನಪ್ರಿಯವಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕ್ರೆಡ್ ಏರುಗತಿ ಪಡೆದಿಲ್ಲ.

ಇಷ್ಟು ಕಡಿಮೆ ಸಂಬಳ ತಾನು ಪಡೆಯುತ್ತಿರುವ ಸಂಗತಿಯನ್ನು ಕ್ರೆಡ್ ಸಿಇಒ ಕುನಾಲ್ ಅವರೇ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಬಹಿರಂಗಪಡಿಸಿದ್ದಾರೆ. ಬಳಕೆದಾರ ಒಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಜನರ ಜೊತೆ ಮುಕ್ತ ಸಂವಾದದಲ್ಲಿ ತೊಡಗಿದ ಅವರು ತಾನು ಅಷ್ಟು ಕಡಿಮೆ ಸಂಬಳದಲ್ಲಿ ಹೇಗೆ ಬದುಕಲು ಸಾಧ್ಯ ಎಂಬುದನ್ನು ತಿಳಿಸಿದ್ದಾರೆ. ಈ ವಿಚಾರ ಟ್ವಿಟ್ಟರ್​ನಂತಹ ಸಾಮಾಜಿಕ ತಾಣದಲ್ಲೂ ಚರ್ಚೆಗೆ ಗ್ರಾಸವಾಗಿದೆ.

https://twitter.com/Iampatelajeet/status/1629817261702668289?ref_src=twsrc%5Etfw%7Ctwcamp%5Etweetembed%7Ctwterm%5

https://twitter.com/ankit_jds/status/1629839443137040388?ref_src=twsrc%5Etfw%7Ctwcamp%5Etweetembed%7Ctw

https://twitter.com/sidg30/status/1630043617544007680?ref_src=twsrc%5Etfw%7Ctwcamp%5Etweetembed%7Ctwterm%5E1630043617544007680%7Ctwgr%5E2d160ebad138fc27eae9bbb36a3802f88be02d25%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcred-ceo-kunal-shah-reveals-his-salary-during-instagram-qa-session-internet-has-a-lot-to-say-2340177-2023-02-27

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read