ಕಾರು ಚಾಲಕನ ಹುಚ್ಚಾಟ ; ಡಿವೈಡರ್ ಮೇಲೆ ಚಲಾಯಿಸಿದ ವಿಡಿಯೋ ವೈರಲ್ | Watch

ಅಂಧೇರಿ ಪಶ್ಚಿಮದ ಫೋರ್ ಬಂಗಲೋಸ್ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಕಾರು ಚಾಲಕನೊಬ್ಬ ಡಿವೈಡರ್ ಮೇಲೆ ವಾಹನ ಚಲಾಯಿಸಿ ರಸ್ತೆ ದಾಟಲು ಯತ್ನಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಅಪಾಯಕಾರಿ ಕೃತ್ಯವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾರ್ವಜನಿಕರು ಚಾಲಕನ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿರ್ಲಕ್ಷ್ಯದಿಂದಾಗಿ ಅನೇಕರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಮುಂಬೈ ಸಂಚಾರ ಪೊಲೀಸರ ಅಧಿಕೃತ ಖಾತೆಗೆ ಟ್ಯಾಗ್ ಮಾಡಿ, “ಅಂಧೇರಿ ಪಶ್ಚಿಮದ ಫೋರ್ ಬಂಗಲೋಸ್ ಮಾರುಕಟ್ಟೆಯಲ್ಲಿ ಡಿವೈಡರ್ ಮೇಲೆ ಕಾರು ಹರಿಸುತ್ತಿದ್ದಾನೆ. ಇವನಿಗೆ ಎಷ್ಟು ಧೈರ್ಯ? @MTPHereToHelp ದಯವಿಟ್ಟು ಈ ವಾಹನದ ಮಾಲೀಕರಿಗೆ ಇತರರ ಸುರಕ್ಷತೆಗೆ ಅಪಾಯ ತಂದೊಡ್ಡಿದಕ್ಕಾಗಿ ದಂಡ ವಿಧಿಸಿ” ಎಂದು ಒತ್ತಾಯಿಸಿದ್ದಾರೆ.

ಅಂಧೇರಿ ಲೋಖಂಡವಾಲಾ ಮತ್ತು ಓಶಿವಾರಾ ವರ್ಸೋವಾ ನಿವಾಸಿಗಳ ಸಂಘಟನೆಯ (@AndheriLOCA) ಅಧಿಕೃತ ಎಕ್ಸ್ ಖಾತೆಯೂ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಮಹೀಂದ್ರಾ ಸ್ಕಾರ್ಪಿಯೋ ಎನ್ ವಾಹನವು ಹತ್ತಿರದಲ್ಲೇ ಇದ್ದ ಯು-ಟರ್ನ್ ಬಳಸುವ ಬದಲು ಡಿವೈಡರ್ ಮೇಲೆ ಹತ್ತಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ವಿಡಿಯೋದಲ್ಲಿ ಕಾಣುವ ನಂಬರ್ ಪ್ಲೇಟ್ ಪ್ರಕಾರ ಈ ಕಾರು ಉತ್ತರ ಪ್ರದೇಶದಲ್ಲಿ ನೋಂದಣಿಯಾಗಿದೆ.

ವಿಡಿಯೋದಲ್ಲಿ ಚಾಲಕ ಡಿವೈಡರ್ ಹತ್ತಿ ಬಲಕ್ಕೆ ತಿರುಗಲು ಪದೇ ಪದೇ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇದರಿಂದಾಗಿ ವಿರುದ್ಧ ದಿಕ್ಕಿನ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಷ್ಟೇ ಅಲ್ಲದೆ, ಇತರ ವಾಹನಗಳು ಆ ಕಿರಿದಾದ ಜಾಗದಲ್ಲಿ ಎಚ್ಚರಿಕೆಯಿಂದ ಹಾದುಹೋಗಬೇಕಾಯಿತು. ಈ ಅಪಾಯಕಾರಿ ಚಾಲನೆಯನ್ನು ಅನೇಕರು ಖಂಡಿಸಿದ್ದಾರೆ.

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಮುಂಬೈ ಸಂಚಾರ ಪೊಲೀಸರು, ಮಾಹಿತಿಯನ್ನು ಸಂಬಂಧಪಟ್ಟ ಡಿ. ಎನ್. ನಗರ ಸಂಚಾರ ವಿಭಾಗದ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಸಾರ್ವಜನಿಕರು ಕೇವಲ ಪ್ರತಿಕ್ರಿಯೆ ನೀಡಿದರೆ ಸಾಲದು, ಚಾಲಕನಿಗೆ ವಿಧಿಸಲಾದ ಇ-ಚಲನ್‌ನ ಪುರಾವೆಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read