ಹಸುವಿನ ಹಾಲು ಅಥವಾ ಎಮ್ಮೆಯ ಹಾಲು ಆರೋಗ್ಯಕ್ಕೆ ಯಾವುದು ಬೆಸ್ಟ್‌…..? ಇಲ್ಲಿದೆ ಮಾಹಿತಿ

ಹಾಲು ಸಂಪೂರ್ಣ ಆಹಾರ. ಹಸುವಿನ ಹಾಲು, ಎಮ್ಮೆ ಹಾಲು ಎರಡೂ ಆರೋಗ್ಯಕರ ಮತ್ತು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಒಳ್ಳೆಯ ನಿದ್ದೆ ಬರಬೇಕೆಂದರೆ ರಾತ್ರಿ ಎಮ್ಮೆ ಹಾಲು ಕುಡಿಯುವಂತೆ ಮನೆಯ ಹಿರಿಯರು ಕೂಡ ಸಲಹೆ ನೀಡ್ತಾರೆ. ಖೋಯಾ, ಮೊಸರು, ಖೀರ್, ಪಾಯಸ, ಮಲಾಯಿ, ಕುಲ್ಫಿ ಮತ್ತು ತುಪ್ಪವನ್ನು ತಯಾರಿಸಲು ಎಮ್ಮೆ ಹಾಲು ಉತ್ತಮವೆಂದು ಪರಿಗಣಿಸಲಾಗಿದೆ. ಎಮ್ಮೆ ಹಾಲು ಅತ್ಯಂತ ಪೌಷ್ಟಿಕವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

ಒಬ್ಬ ವ್ಯಕ್ತಿಯು ಪ್ರತಿದಿನ ಕೇವಲ ಒಂದು ಲೋಟ ಹಾಲು ಕುಡಿದರೆ ಆತನ ದೇಹವು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಅವಶ್ಯಕ. ಆದರೆ ಹಸು ಮತ್ತು ಎಮ್ಮೆ ಹಾಲಿನಲ್ಲಿ ಯಾವುದು ಉತ್ತಮ ಅನ್ನೋದು ಅನೇಕರ ಗೊಂದಲ. ಇವೆರಡರ ನಡುವೆ ಏನಾದರೂ ಗಮನಾರ್ಹ ವ್ಯತ್ಯಾಸವಿದೆಯೇ ಎಂಬುದನ್ನು ನೋಡೋಣ.

ನೀರಿನಂಶ

ಪ್ರತಿಯೊಬ್ಬರ ದೇಹಕ್ಕೂ ನೀರು ಬೇಕೇ ಬೇಕು. ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಲು ಬಯಸಿದರೆ ಹಸುವಿನ ಹಾಲನ್ನು ಕುಡಿಯಲು ಪ್ರಾರಂಭಿಸಿ. ಹಸುವಿನ ಹಾಲು 90 ಪ್ರತಿಶತದಷ್ಟು ನೀರನ್ನು ಹೊಂದಿರುತ್ತದೆ ಮತ್ತು ದೇಹವನ್ನು ಹೈಡ್ರೇಟ್ ಆಗಿಡುತ್ತದೆ.

ಕೊಬ್ಬು

ಹಾಲಿನ ಸ್ಥಿರತೆಗೆ ಕೊಬ್ಬು ಕಾರಣವಾಗಿದೆ. ಹಸುವಿನ ಹಾಲಿನಲ್ಲಿ ಎಮ್ಮೆಯ ಹಾಲಿಗಿಂತ ಕಡಿಮೆ ಕೊಬ್ಬಿನಂಶವಿದೆ. ಎಮ್ಮೆ ಹಾಲು ಹಸುವಿನ ಹಾಲಿಗಿಂತ ದಪ್ಪವಾಗಿರಲು ಇದೇ ಕಾರಣ. ಹಸುವಿನ ಹಾಲು 3-4 ಪ್ರತಿಶತ ಕೊಬ್ಬನ್ನು ಹೊಂದಿರುತ್ತದೆ, ಆದರೆ ಎಮ್ಮೆ ಹಾಲು 7-8 ಪ್ರತಿಶತ ಕೊಬ್ಬನ್ನು ಹೊಂದಿರುತ್ತದೆ.

ಎಮ್ಮೆ ಹಾಲು ಹೊಟ್ಟೆಗೆ ಭಾರವಾಗಿರುತ್ತದೆ, ಆದ್ದರಿಂದ ಇದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಅದನ್ನು ಕುಡಿದ ನಂತರ ದೀರ್ಘಕಾಲ ಹಸಿವಾಗುವುದಿಲ್ಲ.

ಕ್ಯಾಲೋರಿ

ಎಮ್ಮೆಯ ಹಾಲು ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಏಕೆಂದರೆ ಇದರಲ್ಲಿ ಹೆಚ್ಚು ಪ್ರೋಟೀನ್ ಮತ್ತು ಕೊಬ್ಬಿನಂಶವಿದೆ. ಒಂದು ಕಪ್ ಎಮ್ಮೆ ಹಾಲು 237 ಕ್ಯಾಲೋರಿಗಳಿರುತ್ತವೆ. ಒಂದು ಕಪ್ ಹಸುವಿನ ಹಾಲಿನಲ್ಲಿ 148 ಕ್ಯಾಲೋರಿಗಳಿವೆ.

ಪ್ರೋಟೀನ್‌

ಹಸುವಿನ ಹಾಲಿಗೆ ಹೋಲಿಸಿದರೆ ಎಮ್ಮೆಯ ಹಾಲಿನಲ್ಲಿ ಶೇ.10-11ರಷ್ಟು ಪ್ರೊಟೀನ್ ಇರುತ್ತದೆ. ಹೆಚ್ಚಿನ ಪ್ರಮಾಣದ ಪ್ರೊಟೀನ್ ಇರುವ ಕಾರಣ ಚಿಕ್ಕ ಮಕ್ಕಳಿಗೆ ಮತ್ತು ವೃದ್ಧರಿಗೆ ಎಮ್ಮೆಯ ಹಾಲನ್ನು ನೀಡಬಾರದು.

ಕೊಲೆಸ್ಟ್ರಾಲ್

ಈ ಎರಡು ಬಗೆಯ ಹಾಲಿನಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವೂ ಭಿನ್ನವಾಗಿರುತ್ತದೆ. ಎಮ್ಮೆಯ ಹಾಲು ಕಡಿಮೆ ಕೊಲೆಸ್ಟ್ರಾಲ್ ಅಂಶವನ್ನು ಹೊಂದಿದೆ. ಆದ್ದರಿಂದ ಇದು ಪಿಸಿಓಡಿ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ತೊಂದರೆಗಳು ಮತ್ತು ಬೊಜ್ಜು ಹೊಂದಿರುವವರಿಗೆ ತುಂಬಾ ಒಳ್ಳೆಯದು.

ಕ್ಯಾಲ್ಸಿಯಂ

ಒಂದು ಕಪ್‌ ಎಮ್ಮೆ ಹಾಲನ್ನು ಸೇವಿಸಿದರೆ ಅದರಲ್ಲಿ ಕ್ಯಾಲ್ಸಿಯಂ ಅಂಶವು 412 ಮಿಲಿ ಗ್ರಾಂ ಇರುತ್ತದೆ. ಇದು ರಂಜಕ, ಮೆಗ್ನೀಸಿಯಮ್ ಮತ್ತು ಕ್ಲೋರೈಡ್ ಅನ್ನು ಸಹ ಒಳಗೊಂಡಿದೆ.

ಒಂದು ಕಪ್ ಹಸುವಿನ ಹಾಲಿನಲ್ಲಿ 305 ಮಿಲಿ ಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಪ್ರತಿದಿನ ಈ ಹಾಲನ್ನು ಕುಡಿದರೆ ಮೂಳೆ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ. ಈ ಹಾಲಿನಲ್ಲಿ ಪ್ರೋಟೀನ್, ವಿಟಮಿನ್ ಎ ಮತ್ತು ವಿಟಮಿನ್ ಡಿ ಹೇರಳವಾಗಿ ಕಂಡುಬರುತ್ತದೆ.

ಯಾವುದು ಬೆಸ್ಟ್‌?

ಹಸು ಮತ್ತು ಎಮ್ಮೆ ಎರಡೂ ಹಾಲು ಆರೋಗ್ಯಕ್ಕೆ ಒಳ್ಳೆಯದು. ಎರಡೂ ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಆದ್ದರಿಂದ ಯಾವುದ್ನು ಕುಡಿಯಲು ಬಯಸುತ್ತೀರಿ ಎಂಬುದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಪ್ರತಿದಿನ ಹಾಲು ಕುಡಿಯಬೇಕು. ರಾತ್ರಿ ಶಾಂತಿಯುತ ನಿದ್ರೆ ಬಯಸಿದರೆ ಎಮ್ಮೆ ಹಾಲು ಕುಡಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read