ಕೋವಿಡ್ ಸಂಬಂಧಿತ ಕಾಯಿಲೆಯಿಂದ 4 ತಿಂಗಳ ಹಸುಗೂಸು ಮೃತ….!

ಕೋವಿಡ್ ಕಾಲ ಮುಗಿಯಿತು ಎನ್ನುವ ಹೊತ್ತಲ್ಲೇ ಆತಂಕಕಾರಿ ಪ್ರಕರಣ ವರದಿಯಾಗಿದೆ. ಮುಂಬೈನಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ನಾಲ್ಕು ತಿಂಗಳ ಮಗು COVID-19- ಸಂಬಂಧಿತ ಸಮಸ್ಯೆಯಿಂದ ಮೃತಪಟ್ಟಿದೆ. ಕೋವಿಡ್ ಸೋಂಕಿಗೆ ಒಳಗಾಗಿದ್ದ ಮಗು ಮಂಗಳವಾರ ಪ್ರಾಣಬಿಟ್ಟಿದೆ. ಮುಂಬೈನಲ್ಲಿ ಕೋವಿಡ್ ಸಂಬಂಧಿತ ಕಾಯಿಲೆಗಳಿಂದ ಮೃತಪಟ್ಟ ಅತಿ ಕಿರಿಯ ವಯಸ್ಸಿನವರಲ್ಲಿ ಈ ಮಗು ಸೇರಿದೆ.

ಸಾವು ವರದಿಯಾದ ನಂತರ ಬೃಹತ್ ಮುಂಬೈ ಕಾರ್ಪೊರೇಷನ್ ನಾಗರಿಕ ಸಂಸ್ಥೆಯ ಅಧಿಕಾರಿಗಳು ಅತಿ ಕಿರಿಯ ವಯಸ್ಸಿನ ಮಗುವಿನ ಯಾವುದೇ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು. ಆದಾಗ್ಯೂ ಕೊರೊನಾವೈರಸ್ ಸೋಂಕಿನಿಂದಾಗಿ ಪುಟ್ಟ ಗಂಡುಮಗು ತೀವ್ರವಾದ ಉಸಿರಾಟದ ತೊಂದರೆ ಎದುರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2020 ರಲ್ಲಿ ಸಾಂಕ್ರಾಮಿಕ ರೋಗ ಹರಡಿದ ನಂತರ ನಗರದಲ್ಲಿ COVID-19 ಸಾವುಗಳು ಕಡಿಮೆಯಾಗಿದೆ ಎಂದು BMC ಡೇಟಾ ಬಹಿರಂಗಪಡಿಸಿದ ಒಂದು ದಿನದ ನಂತರ ಈ ಘಟನೆ ವರದಿಯಾಗಿದೆ.

ಮಂಗಳವಾರ ಮುಂಬೈನಲ್ಲಿ 16 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 142 ಸಕ್ರಿಯ ಪ್ರಕರಗಳಿದ್ದು ಓರ್ವರು ಸಾವನ್ನಪ್ಪಿದ್ದಾರೆಂದು ವರದಿಯಾಗಿತ್ತು. ಮೇ 23 ರಂದು ಮಹಾರಾಷ್ಟ್ರ ರಾಜ್ಯದಲ್ಲಿ ವರದಿಯಾದ 39 ಪ್ರಕರಣಗಳಲ್ಲಿ 16 ಪ್ರಕರಣಗಳು ಮುಂಬೈನಿಂದ ವರದಿಯಾಗಿದ್ದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read