ಕೈಗೆ ಬಂದು ಬಾಯಿಗೆ ಬಾರದ 1,765 ಕೋಟಿ ರೂ ಜಾಕ್‌ಪಾಟ್…..!

ಯಾವುದೇ ಕೌಶಲ್ಯ ಅಥವಾ ಯೋಜನೆಗಳ ಬಲವಿಲ್ಲದೇ ಬರೀ ಅದೃಷ್ಟದ ಮೇಲೆ ನಿಂತಿರುವ ಲಾಟರಿಯಾಟ ’ಅದೃಷ್ಟದಾಟ’ ಎಂದು ಸರಿಯಾಗಿಯೇ ಕರೆಯಲ್ಪಟ್ಟಿದೆ.

ಲಾಟರಿಯಲ್ಲಿ ಬಹುಮಾನ ಗೆಲ್ಲಲು ಏನೇ ತಂತ್ರಗಳನ್ನು ಹೆಣೆದರೂ ಸಹ ಕೊನೆಗೆ ಅಂತಿಮ ಫಲಿತಾಂಶ ಮಾತ್ರ ಅದೃಷ್ಟದ ಮೇಲೆಯೇ ನಿಂತಿರುತ್ತದೆ. ಆದರೆ ಗೆಲ್ಲಲು ಬೇಕಾದ ಅಂಕಿಗಳು ನಿಮ್ಮಲ್ಲಿದ್ದರೂ ದುಡ್ಡು ಗೆಲ್ಲದೇ ಹೋದರೆ ಎಷ್ಟು ನಿರಾಶೆಯಾಗೋದಿಲ್ಲ?

182 ಮಿಲಿಯನ್ ಯೂರೋ (1,765 ಕೋಟಿ ರೂ) ಜಾಕ್‌ಪಾಟ್‌ ಅನ್ನು ತಾವು ಗೆದ್ದಿರುವ ವಿಚಾರ ತಿಳಿದರೂ ಸಹ ಈ ಜೋಡಿಗೆ ಬಹುಮಾನದ ಹಣ ತಮಗೆ ದೊರಕುವುದಿಲ್ಲ ಎಂದು ತಿಳಿದು ಭಾರೀ ನಿರಾಶೆಯಾಗಿದೆ.

ಸಾಪ್ತಾಹಿಕ ಟಿಕೆಟ್‌ ಒಂದನ್ನು ತಾನು ಖರೀದಿ ಮಾಡಲು ಹೋಗಿ, ಅದು ಖರೀದಿ ಆಗದೇ ಇರುವುದು ಅರಿವಿಗೆ ಬರುವ ಮುನ್ನವೇ ತನಗೆ ಈ ಜಾಕ್‌ಪಾಟ್ ಒಲಿದಿದೆ ಎಂದು 19 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಮಿಸ್ ಆಗಿ ಅನಿಸಿತ್ತು. ರಾಷೆಲ್ ಕೆನಡಿ ಹೆಸರಿನ ಈ ವಿದ್ಯಾರ್ಥಿನಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಈ ವಿನ್ನಿಂಗ್ ನಂಬರ್‌ ಅನ್ನು ಪಡೆಯುವುದರಲ್ಲಿದ್ದರು. ಬ್ರಿಟನ್‌ನ ಹರ್ಟ್‌‌ಫೋರ್ಡ್‌ಶೈರ್‌ನಲ್ಲಿ ಈ ಇಬ್ಬರೂ ಜಾಕ್‌ಪಾಟ್‌ ಗೆದ್ದಿದ್ದಾರೆಂದು ತಿಳಿಸಲಾಗಿತ್ತು.

ಜಾಕ್‌ಪಾಟ್‌ ಅನ್ನು ತಾನು ಗೆದ್ದಿರುವುದಾಗಿ ಭಾವಿಸಿದ್ದ ರಾಶೆಲ್ ತನ್ನ ಬಾಯ್‌ಫ್ರೆಂಡ್ ಹಾಗೂ ತಾಯಿಯನ್ನು ತನ್ನ ಕೋಣೆಗೆ ಕರೆಯಿಸಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವುದರಲ್ಲಿದ್ದಳು.

ಇದೇ ಸಿರಿಯಲ್ಲಿದ್ದ ವೇಳೆಯಲ್ಲೇ ರಾಶೆಲ್‌ಗೆ ಬರಸಿಡಿಲೊಂದು ಬಂದು ಅಪ್ಪಳಿಸಿತ್ತು. ತಾನು ಖರೀದಿ ಮಾಡಲು ಹೊರಟಿದ್ದ ಟಿಕೆಟ್‌ಗೆ ಹಣ ಪಾವತಿ ಮಾಡಲು ತನ್ನ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೇ ಇದ್ದ ಕಾರಣ ಈ ಸಂಬಂಧ ನಡೆಸಿದ್ದ ಇ-ವಹಿವಾಟು ರದ್ದಾಗಿತ್ತು!

ತನ್ನ ಜೀವನ ಸೆಟಲ್ ಆಯಿತೆಂದು ಭಾವಿಸಿ ಸಂಭ್ರಮದ ಆಗಸದಲ್ಲಿ ತೇಲಾಡುತ್ತಿದ್ದ ರಾಶೆಲ್‌ಗೆ ಈ ವಿಷಯ ಬರಸಿಡಿಲಿನಂತೆ ಬಂದಪ್ಪಳಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read