ಭಯಾನಕ ಘಟನೆಯೊಂದರಲ್ಲಿ, ರಾತ್ರಿ ವೇಳೆ ದಂಪತಿ ತಮ್ಮ ಬೈಕ್‌ನಲ್ಲಿ ಹೋಗುವಾಗ ಸಿಂಹವೊಂದು ಏಕಾಏಕಿ ಎದುರಾಗಿದೆ. ಇದರಿಂದ ಭಯಭೀತರಾದ ದಂಪತಿ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕಜಾಲತಾಣಗಳಲ್ಲಿ ವೈರಲ್ ಆಗಿದೆ
ಈ ಘಟನೆ ಅಕ್ಟೋಬರ್ 6 ರಂದು ರಾತ್ರಿ 11:00 ಗಂಟೆಗೆ ಗುಜರಾತ್‌ನ ಸೋಮನಾಥದ ನವಬಂದರ್ ಗ್ರಾಮದ ಶ್ರೀರಾಮ ದೇವಸ್ಥಾನದ ಬಳಿ ನಡೆದಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ದಂಪತಿ ಹಳ್ಳಿಯ ಮೂಲಕ ಬೈಕಿನಲ್ಲಿ ಹೋಗುವಾಗ ರಸ್ತೆಯ ಮಧ್ಯದಲ್ಲಿ ನಿಂತಿರುವ ಆಕೃತಿಯನ್ನು ಗಮನಿಸಿದ್ದಾರೆ. ಮೊದಲಿಗೆ ಅದು ಬೀದಿ ನಾಯಿ ಇರಬಹುದೆಂದು ಭಾವಿಸಿ ಪ್ರಯಾಣ ಮುಂದುವರೆಸಿದ್ದು, ಆದರೆ, ಬೈಕ್ ಹತ್ತಿರ ಬರುತ್ತಿದ್ದಂತೆ ಸಿಂಹ ಕಂಡು ಬಂದಿದೆ.
ಈ ಅನಿರೀಕ್ಷಿತ ದೃಶ್ಯದಿಂದ ಗಾಬರಿ ಮತ್ತು ಭಯಗೊಂಡ ದಂಪತಿ ಬೈಕ್‌ನಿಂದ ಜಿಗಿದು ಕಾಲ್ನಡಿಗೆಯಲ್ಲಿ ಓಡಿದ್ದಾರೆ. ಈ ಸಂಪೂರ್ಣ ದೃಶ್ಯವು ಸಮೀಪದ ಮನೆಯೊಂದರ ಹೊರಗೆ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಂಹವು ಕೂಡ ಆಕ್ರಮಣಕಾರಿಗಿಂತ ಹೆಚ್ಚು ದಿಗ್ಭ್ರಮೆಗೊಂಡಂತೆ ಕಂಡು ಬಂದಿದ್ದು, ದಂಪತಿ ಓಡಿಹೋಗುತ್ತಿದ್ದಂತೆ ಕುತೂಹಲದಿಂದ ಗಮನಿಸಿ ನಂತರ ಅವರು ಓಡಿದ ದಿಕ್ಕಿನಲ್ಲಿ ನಿಧಾನವಾಗಿ ಮುಂದುವರೆದಿದೆ.
https://twitter.com/ManojSh28986262/status/1844254986433159604?ref_src=twsrc%5Etfw%7Ctwcamp%5Etweetembed%7Ctwterm%5E1844254986433159604%7Ctwgr%5E109b4c3f0e20c8479abb706c2c79475cd2735d62%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fvideocoupleonbikefleesinpanicafterencounteringlionatnightingujaratssomnath-newsid-n634536547