ಕ್ವಾರಂಟೈನ್​ ಅವಧಿಯಲ್ಲಿ ಚಿಗುರಿದ ಪ್ರೀತಿ: ಮದುವೆಯಾದ ಜೋಡಿ ಸುದ್ದಿ ವೈರಲ್​

ಚೀನಾದಲ್ಲಿ ಕೋವಿಡ್​ ಹೆಚ್ಚುತ್ತಿರುವ ನಡುವೆಯೇ ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಜೋಡಿಯೊಂದು 10 ದಿನಗಳನ್ನು ಒಟ್ಟಿಗೆ ಕ್ವಾರಂಟೈನ್​ನಲ್ಲಿ ಕಳೆದು ಅಲ್ಲಿಯೇ ಪ್ರೀತಿ ಮಾಡಿರುವ ಘಟನೆ ನಡೆದಿದ್ದು, ಅದೀಗ ವೈರಲ್​ ಆಗಿದೆ.

ಕ್ವಾರಂಟೈನ್ ಅವಧಿಯಲ್ಲಿ ಪ್ರೀತಿಯಲ್ಲಿ ಸಿಲುಕಿದ ಜೋಡಿ, ನಂತರ ಮದುವೆಯಾಗಿದೆ. ಯುವತಿ ಅದೇ ಅಪಾರ್ಟ್​ಮೆಂಟ್​ನಲ್ಲಿ ಇದ್ದರೆ, ಯುವಕ ತನ್ನ ಸ್ನೇಹಿತನ ಮನೆಗೆಂದು ಈ ಅಪಾರ್ಟ್​ಮೆಂಟ್​ಗೆ ಬಂದಿದ್ದ. ನಂತರ ಅಪಾರ್ಟ್​ಮೆಂಟ್​ನ ಕೆಲವು ಮನೆಯಲ್ಲಿ ಕೊರೋನಾ ಹೆಚ್ಚಾಗಿದ್ದರಿಂದ ಅದನ್ನು ಸೀಲ್​ ಮಾಡಲಾಗಿತ್ತು. ವೈರಸ್​ಗೆ ತುತ್ತಾಗದೇ ಇರುವವರನ್ನು ಒಂದೆಡೆ ಇರಿಸಲಾಗಿತ್ತು.

ಹೀಗೆ ಒಟ್ಟಿಗೇ ಇದ್ದಿದ್ದರಿಂದ ಪ್ರೀತಿ ಚಿಗುರೊಡೆದಿದೆ. ಹೀಗೆ ಮಾತನಾಡುತ್ತಿದ್ದ ವೇಳೆ ಇಬ್ಬರೂ ಒಂದೇ ಶಾಲೆಯಲ್ಲಿ ಒಟ್ಟಿಗೆ ಕಲಿತವರು ಎಂದು ತಿಳಿದಿದೆ. ಹೀಗೆ ಆರಂಭವಾದ ಮಾತು, ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದಾರೆ.

ಮದುವೆ ಸ್ವರ್ಗದಲ್ಲಿಯೇ ಮಾಡಿರುವುದು ಎನ್ನಲಾಗುತ್ತದೆ. ಚೀನಿ ಜೋಡಿಯ ವಿಷಯದಲ್ಲಿಯೂ ಇದು ನಿಜವಾಗಿದೆ. ಎಲ್ಲಿಯೋ ಇದ್ದವರು ಹೇಗೋ ಒಂದೆಡೆ ಸೇರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ರೋಚಕ ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read