BIG NEWS: ಕಲುಷಿತ ಆಹಾರ ಸೇವಿಸಿ ದಂಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಗನಿಂದಲೇ ಹತ್ಯೆ…!

ಹಾಸನ: ಕಲುಷಿತ ಆಹಾರ ಸೇವಿಸಿ ದಂಪತಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಿಖೆಯ ವೇಳೆ ದಂಪತಿ ಸಾವಿನ ರಹಸ್ಯ ಬಲಯಾಗಿದೆ.

ಮಗನೇ ತನ್ನ ತಂದೆ-ತಾಯಿಗಳಿಗೆ ವಿಷ ಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ತಂದೆ-ತಾಯಿ ತಿನ್ನುವ ತಿಂಡಿಯಲ್ಲಿ ವಿಷ ಬೆರೆಸಿ ಕೊಟ್ಟು ಹೆತ್ತ ತಂದೆ-ತಾಯಿಯನ್ನೇ ಮಗ ಕೊಲೆ ಮಾಡಿದ್ದಾನೆ.

ಆರೋಪಿ ಪುತ್ರ 27 ವರ್ಷದ ಮಂಜುನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಿಸಿಲಹಳ್ಳಿ ಗ್ರಾಮದಲ್ಲಿ ಉಮಾ (48) ನಂಜುಂಡಪ್ಪ (55) ಎಂಬ ದಂಪತಿ ಆಗಸ್ಟ್ 15ರಂದು ಮನೆಯಲ್ಲಿ ಊಟ ಮಾಡಿದ ಬಳಿಕ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿ ಮನೆಗೆ ತೆರಳಿದ್ದವರು ಏಕಾಏಕಿ ಸಾವನ್ನಪ್ಪಿದ್ದರು.

ದಂಪತಿ ಎರಡು ದಿನಗಳ ಹಿಂದೆ ಏಕಾಏಕಿ ಸಾವನ್ನಪ್ಪಿದ್ದರು. ಆದರೆ ಕಲುಷಿತ ಆಹಾರ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಮಗ ಮಂಜುನಾಥ್ ತಿಳಿಸಿದ್ದ. ಅನುಮಾನಗೊಂಡು ಪೊಲೀಸರು ತನಿಖೆ ನಡೆಸಿದಾಗ ಮಗನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಮಂಜುನಾಥ್ ವಿದವೆ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಇದಕ್ಕೆ ತಾಯಿ ಉಮಾ ತೀವ್ರವಾಗಿ ವಿರೋಧಿಸಿದ್ದರಂತೆ ಅಲ್ಲದೇ ಮಗ ಹಣ ನೀಡುವಂತೆ ಕೇಳಿದರೆ ಹಣ ಕೊಡಲು ನಿರಾಕರಿಸಿದ್ದರಂತೆ. ಇದರಿಂದ ಕೋಪಗೊಂಡ ಮಗ ಮಂಜುನಾಥ್, ಬೆಳಿಗ್ಗೆ ತಾಯಿ ತಿಂಡಿಗೆ ಪಲಾವ್ ಮಾಡಿದ್ದಾಗ ತಾನು ಮೊದಲು ತಿಂಡಿ ತಿಂದು ಬಳಿಕ ಪಲಾವ್ ಗೆ ಕ್ರಿಮಿನಾಶಕ ಬೆರಸಿ ತಂದೆ-ತಾಯಿಗೆ ಕೊಟ್ಟಿದ್ದಾನೆ. ಇದನ್ನು ತಿಂದ ತಂದೆ-ತಾಯಿ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read