ಬೆಂಗಳೂರು: ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಯನ್ನು ರೈಲ್ವೇ, ಮತ್ತು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಲೋಕಾರ್ಪಣೆಗೊಳಿಸಿದರು.
ನಗರದ ಕೆಂಬ್ರಿಡ್ಜ್ ಲೇಔಟ್ನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಯನ್ನು ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು.
ಈ ಅಂಚೆ ಕಚೇರಿಗೆ “ಕೇಂಬ್ರಿಡ್ಜ್ ಲೇಔಟ್ ಪಿಒ” ಎಂದು ಹೆಸರಿಸಲಾಗಿದೆ. ಮಾರ್ಚ್ 21 ರಿಂದ ನಿರ್ಮಾಣದ ಕಾರ್ಯ ಆರಂಭವಾಗಿದ್ದು 44 ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇದನ್ನು ಸಚಿವ ಅಶ್ವಿನಿ ವೈಷ್ಣವ್ ಬೆಳಿಗ್ಗೆಉದ್ಘಾಟಿಸಿ ನಂತರ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದರು.
https://twitter.com/ANI/status/1692383347522302087?ref_src=twsrc%5Etfw%7Ctwcamp%5Etweetembed%7Ctwterm%5E1692383347522302087%7Ctwgr%5E34ad97a7b682e895785e28e33c9dae8dbdb537b9%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fkarnataka-breaking-kannada-news-live-karnataka-politics-cauvery-water-disput-congress-government-siddaramaiah-and-dk-shivakumar-vkb-647622.html