ಜೀನ್ಸ್ ಧರಿಸಿದ್ದ ವಕೀಲನನ್ನು ಹೊರ ಕಳುಹಿಸಿದ ನ್ಯಾಯಾಧೀಶರು

ಜೀನ್ಸ್ ಧರಿಸಿ ನ್ಯಾಯಾಲಯದ ಕಲಾಪಕ್ಕೆ ಆಗಮಿಸಿದ್ದ ಹಿರಿಯ ವಕೀಲರೊಬ್ಬರನ್ನು ‘ಡಿಕೋರ್ಟ್’ (ನ್ಯಾಯಾಲಯದಿಂದ ಹೊರಗೆ ಕಳುಹಿಸುವುದು) ಮಾಡಲಾಗಿದೆ.

ಶುಕ್ರವಾರದಂದು ಗುವಾಹಟಿಯ ಹೈಕೋರ್ಟ್ ನಲ್ಲಿ ಈ ಘಟನೆ ನಡೆದಿದ್ದು, ವಕೀಲ ಬಿ.ಕೆ. ಮಹಾಜನ್ ಎಂಬವರು ಪ್ರಕರಣವೊಂದರ ವಾದ ಮಂಡಿಸಲು ಬಂದ ವೇಳೆ ಜೀನ್ಸ್ ಪ್ಯಾಂಟ್ ಧರಿಸಿದ್ದರು.

ಇದನ್ನು ಗಮನಿಸಿದ ನ್ಯಾಯಮೂರ್ತಿ ಕಲ್ಯಾಣ್ ರೈ ಸುರಾನ ಅವರು ಪೊಲೀಸರನ್ನು ಕರೆಯಿಸಿ ಜೀನ್ಸ್ ಧರಿಸಿದ್ದ ವಕೀಲರನ್ನು ನ್ಯಾಯಾಲಯದಿಂದ ಹೊರಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.

ಅಲ್ಲದೆ ಈ ಆದೇಶವನ್ನು ಮುಖ್ಯ ನ್ಯಾಯಮೂರ್ತಿ, ರಿಜಿಸ್ಟ್ರಾರ್ ಜನರಲ್ ಹಾಗೂ ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾ ಮತ್ತು ಅರುಣಾಚಲ ಪ್ರದೇಶದ ಬಾರ್ ಕೌನ್ಸಿಲ್ ಗಮನಕ್ಕೂ ತರಲಾಗುತ್ತದೆ ಎಂದು ನ್ಯಾಯಮೂರ್ತಿಗಳು ಈ ವೇಳೆ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read