ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ವರ್ಷದ ಹಿಂದೆ ನಿರ್ಮಿಸಿದ್ದ ರಸ್ತೆಯೊಂದು ಇದ್ದಕ್ಕಿದ್ದಂತೆ 20 ಅಡಿ ಕುಸಿದಿದೆ. ಭಾನುವಾರ ಅಪಘಾತದ ವೇಳೆ ಕೌನ್ಸಿಲರ್ ಸೇರಿ ಐವರು ರಸ್ತೆಯಲ್ಲಿ ನಿಂತಿದ್ದರು. ಎಲ್ಲರೂ ಹಳ್ಳಕ್ಕೆ ಬಿದ್ದರು, ಕೌನ್ಸಿಲರ್ ಸುಧೀರ್ ಪನ್ವಾರ್ ಗಾಯಗೊಂಡಿದ್ದಾರೆ. ಅವರನ್ನು ಐಸಿಯುಗೆ ದಾಖಲಿಸಲಾಗಿದೆ.
ಅಪಘಾತದಿಂದ ಆಕ್ರೋಶಗೊಂಡ ಜನರು ಗಲಾಟೆ ಮಾಡಿದ್ದಾರೆ. ರಸ್ತೆ ತಡೆದು ಧರಣಿ ನಡೆಸಿದ್ದಾರೆ. ನಗರ ಶಾಸಕ ರಾಜೀವ್ ಕುಮಾರ್ ಮತ್ತು ಮೇಯರ್ ಡಾ.ಅಜಯ್ ಸಿಂಗ್ ವಿರುದ್ಧ ಘೋಷಣೆ ಕೂಗಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಮತ್ತು ಸಿಟಿ ಮ್ಯಾಜಿಸ್ಟ್ರೇಟ್ ಗಜೇಂದ್ರಕುಮಾರ್ ಆಗಮಿಸಿ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ್ರು.
34ನೇ ವಾರ್ಡ್‌ನ ಮೊಹಲ್ಲಾ ವಿನೋದ್ ವಿಹಾರ್‌ನ ರಸ್ತೆಯು ಒಳಚರಂಡಿ ಮತ್ತು ನೀರಿನ ಲೈನ್ ಸೋರಿಕೆಯಾಗಿ ಒಳಗೊಳಗೆ ಟೊಳ್ಳಾಗಿದೆ. ಇದರ ದುರಸ್ತಿ ಅಮೃತ್ ಯೋಜನೆ ಅಡಿಯಲ್ಲಿ ಪ್ರಾರಂಭವಾಗಿತ್ತು. ಭಾನುವಾರ ಬೆಳಗ್ಗೆ ಕೌನ್ಸಿಲರ್ ಸುಧೀರ್ ಪನ್ವಾರ್ ಖುದ್ದು ಹಾಜರಿದ್ದು, ಕಾಮಗಾರಿಗೆ ಚಾಲನೆ ನೀಡಿದ್ದರು. ಆಗ ಅಪಘಾತ ಸಂಭವಿಸಿದೆ. ಇಬ್ಬರು ಕಾರ್ಮಿಕರು, ನಿರ್ಮಲಾ ಶರ್ಮಾ ಮತ್ತು ಇನ್ನೊಬ್ಬ ಮಹಿಳೆ ಗಾಯಗೊಂಡಿದ್ದಾರೆ.
https://twitter.com/UPNBT/status/1820306661745254866?ref_src=twsrc%5Etfw%7Ctwcamp%5Etweetembed%7Ctwterm%5E1820306661745254866%7Ctwgr%5Ec3c12c782786584fc3ddeb41bfe6340a3bd58892%7Ctwcon%5Es1_&ref_url=https%3A%2F%2Fnavbharattimes.indiatimes.com%2Fstate%2Futtar-pradesh%2Fsaharanpur%2Fsaharanpur-news-councillor-injured-due-to-road-collapsed-watch-video%2Farticleshow%2F112276518.cms