ಇಸ್ರೇಲ್ ಅಧ್ಯಕ್ಷರ ಭೇಟಿಯಾದ ಪ್ರಧಾನಿ ಮೋದಿ: ಪ್ಯಾಲೆಸ್ತೀನ್ ಸಮಸ್ಯೆ ಪರಿಹಾರಕ್ಕೆ ಭಾರತದ ಬೆಂಬಲ ಘೋಷಣೆ

ನವದೆಹಲಿ: ಶುಕ್ರವಾರ ಯುಎಇಯಲ್ಲಿ ನಡೆಯುತ್ತಿರುವ COP28 ವಿಶ್ವ ಹವಾಮಾನ ಆಕ್ಷನ್ ಶೃಂಗಸಭೆ(WCAS) ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿಯಾದರು.

ಉಭಯ ನಾಯಕರು ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ವಕ್ತಾರರು ತಿಳಿಸಿದ್ದಾರೆ.

ಪಿಎಂ ಮೋದಿ ಎರಡು ದೇಶಗಳ ಪರಿಹಾರಕ್ಕಾಗಿ ಭಾರತದ ಬೆಂಬಲದ ಬಗ್ಗೆ ತಿಳಿಸಿ “ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆಗೆ ಶಾಶ್ವತ ಪರಿಹಾರ ಕ್ಕೆ ಕರೆ ನೀಡಿದರು.

ಪೀಡಿತ ಜನರಿಗೆ ಮಾನವೀಯ ನೆರವಿನ ಮತ್ತು ಸುರಕ್ಷಿತ ವಿತರಣೆಯ ಅಗತ್ಯವನ್ನು ಮೋದಿ ಪುನರುಚ್ಚರಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಎರಡು ದೇಶಗಳ ನಡುವೆ ಪರಿಹಾರ ಸೂತ್ರಕ್ಕೆ ಸಲಹೆ ನೀಡಿದ್ದಾರೆ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದರು.

https://twitter.com/MEAIndia/status/1730552582094061667

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read