BIG NEWS : ತಣ್ಣಗಾದ ಬಂದ್ ಬಿಸಿ : ಬಸ್ ಸಂಚಾರ ಆರಂಭ, ಸಹಜ ಸ್ಥಿತಿಯತ್ತ ಕರ್ನಾಟಕ

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಕರೆ ನೀಡಿದಂತಹ ‘ಕರ್ನಾಟಕ ಬಂದ್’ ಯಶಸ್ವಿಯಾಗಿದ್ದು, ವ್ಯಾಪಕ ಪ್ರತಿಭಟನೆ, ಹೋರಾಟಗಳ ಬಳಿಕ ಕರ್ನಾಟಕ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ.

ರಾಜ್ಯದ ಹಲವು ಕಡೆ ಬಂದ್ ಬಿಸಿ ತಣ್ಣಗಾಗಿದ್ದು, ಬಸ್ ಸಂಚಾರ ಆರಂಭ ಆರಂಭವಾಗಿದೆ. ಹಲವು ಕಡೆ ಅಂಗಡಿ ಮುಂಗಟ್ಟುಗಳನ್ನು ಓಪನ್ ಮಾಡಲಾಗುತ್ತಿದೆ.

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗಿದೆ. ಬೆಂಗಳೂರಿನ ಯಶವಂತಪುರ ಸೇರಿದಂತೆ ಹಲವು ಕಡೆ ಜನರು ರಸ್ತೆಗಿಳಿದಿದ್ದು, ಬಿಎಂಟಿಸಿ-KSRTC ಬಸ್ಸು, ಕಾರು, ಬೈಕ್ಗಳ ಸಂಚಾರ ಆರಂಭಿಸಿವೆ. ಅಂಗಡಿ ಮುಂಗಟ್ಟು, ಹೋಟೆಲ್ಗಳು ಓಪನ್ ಆಗುತ್ತಿವೆ. ಇಂದು ಬೆಂಗಳೂರಿನಲ್ಲಿ ಬಸ್ ಸಂಚಾರ ಇದ್ದರೂ ಪ್ರಯಾಣಿಕರ ಸಂಖ್ಯೆ ಭಾರೀ ಕಡಿಮೆ ಇತ್ತು. ಕೆಲವು ಕಡೆ ಇವತ್ತಿಡೀ ನಾವು ಅಂಗಡಿಗಳನ್ನು ಓಪನ್ ಮಾಡುವುದಿಲ್ಲ ಎಂದು ವರ್ತಕರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read