ನಿರೂಪಕಿಯೊಂದಿಗೆ ಅನುಚಿತ ವರ್ತನೆ : ನಟ ಕೂಲ್​ ಸುರೇಶ್​ ವಿರುದ್ಧ ಹೆಚ್ಚಿದ ಆಕ್ರೋಶ

ಚಲನಚಿತ್ರ ಕಾರ್ಯಕ್ರಮವೊಂದರ ನಿರೂಪಕರೊಂದಿಗೆ ಅನುಚಿತವಾಗಿ ವರ್ತಿಸಿದ ವಿಡಿಯೋಗಳು ವೈರಲ್​ ಆದ ಬಳಿಕ ನಟ ಸುರೇಶ್​​ ವಿರುದ್ಧ ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ರೋಶ ಹೆಚ್ಚಾಗಿದೆ.

ಬುಧವಾರದಂದು ಚೆನ್ನೈನಲ್ಲಿ ನಡೆದ ಸರಕ್ಕು ಸಿನಿಮಾದ ಆಡಿಯೋ ರಿಲೀಸ್ ಸಮಾರಂಭದಲ್ಲಿ ನಟ ಕೂಲ್​ ಸುರೇಶ್​ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮನ್ಸೂರ್​ ಅಲಿ ಖಾನ್​ ಕೂಡ ಇದ್ದರು. ಕೊರಳಲ್ಲಿ ಹಾರ ಹಾಕಿಕೊಂಡು ವೇದಿಕೆಯಿಂದ ನಿಂತ ಸುರೇಶ್​, ಈ ಕಾರ್ಯಕ್ರಮದ ನಿರೂಪಕರಿಗೂ ಮೆಚ್ಚುಗೆ ನೀಡಬೇಕು ಎಂದು ಹೇಳುವ ಮೂಲಕ ಬಲವಂತದಿಂದ ನಿರೂಪಕಿಗೆ ಹಾರ ತೊಡಿಸಿದ್ದಾರೆ.

ಇದರಿಂದ ಕೋಪಗೊಂಡ ನಿರೂಪಕಿ ಸಿಟ್ಟಿನಿಂದ ಹಾರವನ್ನು ತೆಗೆದು ನೆಲಕ್ಕೆ ಎಸೆದಿದ್ದಾರೆ. ಇದಾದ ಬಳಿಕ ಸುರೇಶ್​ ನಿರೂಪಕಿಗೆ ಸಮಜಾಯಿಷಿ ಕೊಡಲು ಮುಂದಾಗಿದ್ದಾರೆ. ಆದರೆ ಈ ಎಲ್ಲಾ ಘಟನೆಯಿಂದ ಅಸಮಾಧನಗೊಂಡ ಮನ್ಸೂರ್​​ ಮಹಿಳೆಯ ಬಳಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಸುರೇಶ್​ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅನೇಕರು ಈ ವಿಡಿಯೋವನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್​ ಮಾಡುತ್ತಿದ್ದು ನಟ ಕೂಲ್​ ಸುರೇಶ್​ ವರ್ತನೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಮಹಿಳೆಯೊಂದಿಗೆ ಅವರು ಈ ರೀತಿ ವರ್ತಿಸಿದ್ದನ್ನು ಸಹಿಸಲು ಸಾಧ್ಯವಿಲ್ಲ ಅಂತಾ ಕಿಡಿಕಾರಿದ್ದಾರೆ

https://twitter.com/i/status/1704363477735965176

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read