SHOCKING NEWS: ಆಸ್ಪತ್ರೆಯಲ್ಲಿಯೇ MBBS ವಿದ್ಯಾರ್ಥಿಯಿಂದ ಮತಾಂತರಕ್ಕೆ ಯತ್ನ

ಕಲಬುರಗಿ: ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಆಸ್ಪತ್ರೆಯಲ್ಲಿಯೇ ಮತಾಂತರಕ್ಕೆ ಯತ್ನಿಸಿದ ಘಟನೆ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ನಡೆದಿದೆ.

ರೋಗಿಗಳಿಗೆ ಕ್ರೈಸ್ತ ಧರ್ಮದ ಕರಪತ್ರಗಳನ್ನು ನೀಡಿ ವಿದ್ಯಾರ್ಥಿ ಮತಾಂತರಕ್ಕೆ ಯತ್ನಿಸುತ್ತಿದ್ದ. ಎಂಬಿಬಿಎಸ್ ವಿದ್ಯಾರ್ಥಿ ಹಿನೋ ಡಾಲಿಚಾನ್ ಎಂಬಾತ ರೋಗಿಗಳಿಗೆ ಕ್ರೈಸ್ತ ಧರ್ಮದ ಕರಪತ್ರಗಳನ್ನು ನೀಡಿ ಔಷಧಿ ಹಾಗೂ ಇಂಜಕ್ಷನ್ ಗಳಿಂದ ನಿಮ್ಮ ಕಾಯಿಲೆ ವಾಸಿಯಾಗಲ್ಲ. ಬದಲಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಬನ್ನಿ. ಯೇಸುವಿನ ದಾರಿಯಲ್ಲಿ ನಡೆದು ನಿಮ್ಮ ರೋಗಗಳನ್ನು ದೂರ ಮಾಡಿಕೊಳ್ಳಿ ಎಂದು ಹೇಳುತ್ತಿದ್ದ.

ಮತಾಂತರಕ್ಕೆ ಯತ್ನಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಕಲಬುರಗಿ ಇಎಸ್ಐ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ವಿದ್ಯಾರ್ಥಿ ಹಿನೋ ಡಾಲಿಚಾನ್ ನನ್ನು ಹಿಡಿದು ಪ್ರಶ್ನಿಸಿದ್ದಾರೆ. ಆತ ತಾನು ಎಂಬಿಬಿಎಸ್ ವಿದ್ಯಾರ್ಥಿ. ಓದಲು ರೋಗಿಗಳಿಗೆ ಪೇಪರ್ ನೀಡಿದ್ದೇನೆ ಅಷ್ಟೇ ಎಂದಿದ್ದಾನೆ. ಆತನ ಬ್ಯಾಗ್ ಪರಿಶೀಲನೆ ನಡೆಸಿದಾಗ ಬ್ಯಾಗ್ ನಲ್ಲಿ ಕ್ರೈಸ್ತ ಧರ್ಮದ ಕೆಲ ಅಂಶಗಳು, ಮಲಯಾಳಂ ಹಾಗು ಕನ್ನಡದಲ್ಲಿ ಬರೆದಿರುವ ಕೆಲ ಪುಸ್ತಕಗಳು ಪತ್ತೆಯಾಗಿದೆ.

ಹಿಂದೂ ಸಂಘಟನೆ ಕಾರ್ಯಕರ್ತರು ಎಂಬಿಬಿಎಸ್ ವಿದ್ಯಾರ್ಥಿ ಹಿನೋ ಡಾಲಿಚಾನ್ ವಿರುದ್ಧ ಗುಲಬುರ್ಗ ವಿವಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read