ʼಕುಚ್ಚಲಕ್ಕಿʼ ಸೇವನೆಯಿಂದ ಇದೆ ಆರೋಗ್ಯಕ್ಕೆ ಉತ್ತಮ ಲಾಭ

ಕೆಂಪಕ್ಕಿ ಅಥವಾ ಕುಚ್ಚಲಕ್ಕಿಯ ಸೇವನೆಯಿಂದ ಹೆಚ್ಚಿನ ಲಾಭಗಳಿವೆ, ಇದು ಬೆಳ್ತಿಗೆ ಅಕ್ಕಿಯಿಂದ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂಬುದು ನಿಮಗೆ ಗೊತ್ತೇ?

ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿ ಹೆಚ್ಚು ರುಚಿ. ಏಕೆಂದರೆ ಬೆಳ್ತಿಗೆಯನ್ನು ಪಾಲಿಷಿಂಗ್ ಮಾಡಿಸಿರುತ್ತಾರೆ. ಆದರೆ ಕುಚ್ಚಲಕ್ಕಿಯದ್ದು ಸಹಜ ರುಚಿ. ನೈಸರ್ಗಿಕವಾಗಿ ಬೆಳೆದ ಬೆಳೆ ಇದು. ಇದರಿಂದ ದೇಹದ ಮೇಲೆ ಅಡ್ಡಪರಿಣಾಮಗಳಾಗುವ ಸಾಧ್ಯತೆ ಬಹಳ ಕಡಿಮೆ.

 ಇನ್ನು ಮಧುಮೇಹ ಸಮಸ್ಯೆಯಿಂದ ಬಳಲುವವರಂತೂ ನಿತ್ಯ ಬೆಳ್ತಿಗೆ ಅಕ್ಕಿಯ ಬದಲು ಕುಚ್ಚಲಕ್ಕಿ ಸೇವಿಸುವುದು ಬಹಳ ಒಳ್ಳೆಯದು. ಇನ್ನು ರಕ್ತದಲ್ಲಿ ಏರುತ್ತಿರುವ ಸಕ್ಕರೆಯ ಪ್ರಮಾಣಕ್ಕೆ ಬ್ರೇಕ್ ಹಾಕುತ್ತದೆ. ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಕಾಡುವ ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಇದು ಹೇಳಿ ಮಾಡಿಸಿದ ಮದ್ದು. ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಮಲಬದ್ಧತೆಯನ್ನು ತಡೆಯುವ ಶಕ್ತಿ ಕುಚ್ಚಲಕ್ಕಿಗಿದೆ. ಆದರೆ ಬೆಳ್ತಿಗೆ ಅನ್ನ ಹಲವರಿಗೆ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಂದೊಡ್ಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read