ಆರೋಗ್ಯಕರ ʼಮೂಲಂಗಿʼ ಸೇವನೆಯಿಂದಲೂ ಆಗಬಹುದು ದುಷ್ಪರಿಣಾಮ….!

ಮೂಲಂಗಿ ರುಚಿಕರವಾದ ಮತ್ತು ಪೌಷ್ಟಿಕಾಂಶ ಭರಿತ ತರಕಾರಿ.  ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ಇದರಲ್ಲಿವೆ. ಮೂಲಂಗಿ ಸೇವನೆಯಿಂದ  ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆಯನ್ನು ಇದು ನಿವಾರಿಸಬಲ್ಲದು. ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದಾಗ್ಯೂ  ಮೂಲಂಗಿಯನ್ನು ಸೇವಿಸುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೂಲಂಗಿ ಕೆಲವರಿಗೆ ಹಾನಿಕಾರಕವೂ ಆಗಿರಬಹುದು.

ಕಡಿಮೆ ರಕ್ತದೊತ್ತಡದ ಸಮಸ್ಯೆ ಇರುವವರು ಮೂಲಂಗಿಯನ್ನು ಸೇವಿಸಬಾರದು. ಮೂಲಂಗಿ ಮೂತ್ರವರ್ಧಕ ಗುಣಗಳನ್ನು ಹೊಂದಿದೆ.  ಇದು ದೇಹದಿಂದ ನೀರನ್ನು ತೆಗೆದುಹಾಕುತ್ತದೆ. ಹಾಗಾಗಿ ಇದು ಕಡಿಮೆ ರಕ್ತದೊತ್ತಡದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.

ಹೈಪೊಗ್ಲಿಸಿಮಿಯಾ (ಕಡಿಮೆ ರಕ್ತದ ಸಕ್ಕರೆ) ಸಮಸ್ಯೆ ಇರುವವರು ಮೂಲಂಗಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಮೂಲಂಗಿಯು ಇನ್ಸುಲಿನ್ ಹೆಚ್ಚಿಸುವ ಗುಣಗಳನ್ನು ಹೊಂದಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಪಿತ್ತಗಲ್ಲು ಸಮಸ್ಯೆ ಇರುವವರು ಮೂಲಂಗಿಯನ್ನು ತಿನ್ನಬಾರದು. ಮೂಲಂಗಿಯಲ್ಲಿ ಪಿತ್ತರಸದ ಉತ್ಪತ್ತಿಯನ್ನು ಹೆಚ್ಚಿಸುವ ಗುಣವಿದ್ದು, ಪಿತ್ತಗಲ್ಲು ಸಮಸ್ಯೆಯನ್ನು ಹೆಚ್ಚಿಸಬಹುದು. ಗರ್ಭಿಣಿಯರು ಮೂಲಂಗಿಯನ್ನು ಸೇವಿಸಬಾರದು. ಮೂಲಂಗಿಯು ಗರ್ಭಪಾತಕ್ಕೆ ಕಾರಣವಾಗುವ ಕೆಲವು ಗುಣಗಳನ್ನು ಹೊಂದಿದೆ.

ಹಾಲುಣಿಸುವ ಮಹಿಳೆಯರು ಮೂಲಂಗಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಮೂಲಂಗಿಯಲ್ಲಿರುವ ಕೆಲವು ಅಂಶಗಳು ಎದೆಹಾಲಿನಲ್ಲಿ ಸೇರ್ಪಡೆಯಾಗಿ ಅದು ಮಗುವಿಗೆ ಹಾನಿ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read