ದೇಹದಲ್ಲಿ ʼಕ್ಯಾಲ್ಸಿಯಂʼ ಕಡಿಮೆಯಾಗಿದ್ರೆ ತಪ್ಪದೆ ಇವುಗಳನ್ನು ಸೇವಿಸಿ

ಬಿಳಿ ಎಳ್ಳು ನಮ್ಮ ಶರೀರಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ.

ಬಿಳಿ ಎಳ್ಳನ್ನು ಬಣ್ಣ ಬದಲಾಗುವ ತನಕ ಹುರಿಯಿರಿ. ತಣ್ಣಗಾದ ಬಳಿಕ ಮಿಕ್ಸಿ ಜಾರಲ್ಲಿ ರುಬ್ಬಿ ಪುಡಿ ಮಾಡಿ. ಒಂದು ಚಮಚ ಪುಡಿ ತಿಂದು ಒಂದು ಲೋಟ ಹಾಲು ಕುಡಿಯಿರಿ. ಇಲ್ಲವೇ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇದನ್ನು ದಿನಕ್ಕೆರಡು ಬಾರಿಯೂ ಪ್ರಯತ್ನಿಸಬಹುದು.

ನಾಲ್ಕರಿಂದ ಐದು ಬಾದಾಮಿಯನ್ನು ರಾತ್ರಿ ನೆನಸಿಟ್ಟು ಬೆಳಿಗ್ಗೆ ಅದರ ಸಿಪ್ಪೆಯನ್ನು ತೆಗೆದು ತಿನ್ನಿ. ಬಾದಾಮಿ, ಮೂಳೆ ಹಾಗೂ ಮಾಂಸಖಂಡಗಳಿಗೆ ಶಕ್ತಿ ಒದಗಿಸುತ್ತದೆ. ಖಾಲಿ ಹೊಟ್ಟೆಗೆ ಇದನ್ನು ಸೇವಿಸುವುದರಿಂದ ಬಾದಾಮಿಯ ಇತರ ಪ್ರಯೋಜನಗಳನ್ನೂ ಪಡೆಯಬಹುದು.

ಟೈಪ್ 2 ಡಯಾಬಿಟಿಸ್ ಇದ್ದವರು ಕೂಡ ಎಳ್ಳನ್ನು ತಿನ್ನುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read