Video | ಕ್ರೇನ್‍ಗೆ ಬೆಂಕಿ ಹೊತ್ತಿಕೊಂಡು ಕುಸಿದು ಬಿದ್ದ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ನ್ಯೂಯಾರ್ಕ್: ಅಮೆರಿಕದ ಮ್ಯಾನ್‌ಹ್ಯಾಟನ್‌ನಲ್ಲಿ ನಿರ್ಮಾಣ ಮಾಡುತ್ತಿದ್ದ ಕ್ರೇನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಳಗಿರುವ ರಸ್ತೆಯಲ್ಲಿರುವ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಾ ಕುಸಿದು ಬಿದ್ದಿದೆ. ಈ ಭೀಕರ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆಗಳಲ್ಲಿ ನಿಂತಿರುವ ಜನರು ಕ್ರೇನ್‌ ಅಪ್ಪಳಿಸುವುದನ್ನು ನೋಡಿ ಸಾಧ್ಯವಾದಷ್ಟು ದೂರ ಓಡಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.

ಗಗನಚುಂಬಿ ಕಟ್ಟಡದ ಮೇಲೆ ಬೆಂಕಿಯ ಜ್ವಾಲೆ ಆವರಿಸಿದ್ದು, ಕ್ರೇನ್ ಕೆಳಗೆ ಬೀಳುತ್ತಿರುವ ಭಯಾನಕ ದೃಶ್ಯದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಲಿನಿಂದ ಕೆಳಗೆ ಕ್ರೇನ್ ಬೀಳುತ್ತಿರುವ ಕೆಳಗೆ ಕಾರೊಂದು ಸಿಲುಕಿದೆ. ಅದೃಷ್ಟವಶಾತ್, ಯಾರಿಗೂ ಯಾವುದೇ ಗಾಯಗಳು ಸಂಭವಿಸಿಲ್ಲ.

ಅವಘಡ ಸಂಭವಿಸುವುದನ್ನು ತಪ್ಪಿಸಲು ಕೂಡಲೇ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮತ್ತೊಂದು ಕಟ್ಟಡದ ಮೇಲ್ಛಾವಣಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದ್ರು. ಘಟನಾ ಸ್ಥಳವು ಮ್ಯಾನ್‌ಹ್ಯಾಟನ್‌ನ ಪಶ್ಚಿಮ ಭಾಗದಲ್ಲಿದೆ.

https://twitter.com/spectatorindex/status/1684176237454061568?ref_src=twsrc%5Etfw%7Ctwcamp%5Etweetembed%7Ctwterm%5E1684176237454061568%7Ctwgr%5E9eb7c268217d20ac8034c1c0cd350a68fc37bcf3%7Ctwcon%5Es1_&ref_url=https%3A%2F%2Fwww.freepressjournal.in%2Fworld%2Fconstruction-crane-catches-fire-collapses-in-manhattan-viral-video-shows-terrifying-scene

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read