ಹುಬ್ಬಳ್ಳಿ: 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಲ್ಲಿ ಕಾನ್ಸ್ ಟೇಬಲ್ ಓರ್ವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಹಜರತ್ ಮಿಟ್ಟೇಖಾನ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ದೂರು ನೀಡಲು ಹೋಗಿದ್ದ ವ್ಯಕ್ತಿಯ ಪತ್ನಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ ಕಾನ್ಸ್ ಟೇಬಲ್, ಬಳಿಕ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವೇಳೆ ಆಕೆಯ ಮಗಳ ಜೊತೆಯೂ ಅಶ್ಲೀಲವಾಗಿ ವರ್ತಿಸಿ ದೌರ್ಜನ್ಯವೆಸಗಿದ್ದಾನೆ.
ಕಾನ್ಸ್ ಟೇಬಲ್ ಹಜರತ್ ವಿರುದ್ಧ ಬಾಲಕಿಯ ತಂದೆ ಆರೋಪ ಮಾಡಿದ್ದು, ಈ ಬಗ್ಗೆ ಘಂಟಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಜರತ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.