ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ಸ್ವಾಮಿಗಳದ್ದು! ದಿನಕ್ಕೊಂದು ಮಾತನಾಡಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆದಿದೆ; ಕಾಂಗ್ರೆಸ್ ಕಿಡಿ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ 100 ಕೋಟಿ ಆಫರ್ ಆರೋಪ ಮಾಡಿರುವ ದೇವರಾಜೇಗೌಡ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ, ದಿನಕ್ಕೊಂದು ಮಾತಾಡುವ ದೇವರಾಜೇಗೌಡ ಮಹಿಳೆಯರ ಮಾನ ಕಳೆದ ಪ್ರಕರಣವನ್ನು ಬೇರೆಡೆಗೆ ತಿರುಗಿಸಿ, ರಾಜಕೀಕರಣಗೊಳಿಸಿ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

SIT ಅಧಿಕಾರಿಗಳು ದೇವರಾಜೇಗೌಡರಿಗೆ ಮಾನಸಿಕ ಚಿಕೆತ್ಸೆ ಕೊಡಿಸುವುದು ಒಳ್ಳೆಯದು! ಬ್ರದರ್ ಸ್ವಾಮಿಗಳು ಹೇಳಿಕೊಟ್ಟ ಮಾತನ್ನು ದೇವರಾಜೇಗೌಡ ಆಡಿದ್ದಾರೆ, ಆತನ ಬಾಯಲ್ಲಿ ಬರುವ ಪ್ರತಿ ಮಾತುಗಳಲ್ಲೂ “ದೊಡ್ಡವರ“ ಚಿತಾವಣೆ ಇರುತ್ತದೆ ಎಂದು ಆರೋಪಿಸಿದೆ.

ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ಸ್ವಾಮಿಗಳದ್ದು! ಇದನ್ನು ಸ್ವತಃ ದೇವರಾಜೇಗೌಡ ಒಪ್ಪಿಕೊಂಡಿರುವಾಗ ಅವರ ಮಾತುಗಳಿಗೆ ಗಾಂಬೀರ್ಯತೆಯನ್ನು, ಸತ್ಯವನ್ನು ಹುಡುಕುವುದು ಹಾಸ್ಯಾಸ್ಪದವಾಗುತ್ತದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read