ಅಶ್ಲೀಲ ವಿಡಿಯೋ ವೈರಲ್: ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಕಾಂಗ್ರೆಸ್ ನಾಯಕ ಅಮಾನತು

ಲಖನೌ: ಅಶ್ಲೀಲ ವಿಡಿಯೋ ವಿವಾದದ ಹಿನ್ನೆಲೆಯಲ್ಲಿ ಬಾಗ್‌ಪತ್ ಅಧ್ಯಕ್ಷ ಯೂನಸ್ ಚೌಧರಿ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದೆ.

ಉತ್ತರ ಪ್ರದೇಶದ ಕಾಂಗ್ರೆಸ್ ಬಾಗ್‌ಪತ್ ಜಿಲ್ಲಾಧ್ಯಕ್ಷ ಯೂನಸ್ ಚೌಧರಿ ಅವರು ಆಕ್ಷೇಪಾರ್ಹ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ ನಂತರ ಶನಿವಾರ ಅವರ ಸ್ಥಾನದಿಂದ ತೆಗೆದುಹಾಕಲಾಗಿದೆ.

ಚೌಧರಿ ಅವರನ್ನು ಪದಚ್ಯುತಗೊಳಿಸಿದ ಕುರಿತು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಹೇಳಿಕೆ ನೀಡಿದ್ದು, ನೀವು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದಾಗ ನಿಮ್ಮ ವಿರುದ್ಧ ಮಾಡಿದ ಆರೋಪಗಳು ಪಕ್ಷದ ವರ್ಚಸ್ಸಿಗೆ ಕಳಂಕ ತಂದಿವೆ. ಆದುದರಿಂದ ನಿನ್ನನ್ನು ನಿನ್ನ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.

ಮಹಿಳೆಗೆ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡಿದ ಯೂನಸ್ ಚೌಧರಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ರಾಜಕೀಯ ವಲಯದ ವಿವಾದದ ಬಿರುಗಾಳಿಯನ್ನು ಎಬ್ಬಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಕಾಂಗ್ರೆಸ್ ರಾಜ್ಯ ವಕ್ತಾರ ಅಭಿಮನ್ಯು ತ್ಯಾಗಿ, ಯೂನಸ್ ಚೌಧರಿ ಅವರನ್ನು ಜಿಲ್ಲಾ ಉಸ್ತುವಾರಿ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read