ಜೈಪುರ : ಬಜೆಟ್ ಅಧಿವೇಶನದ ವೇಳೆ ಸದನದಿಂದ ಅಮಾನತುಗೊಂಡ ನಂತರ ಆರು ಕಾಂಗ್ರೆಸ್ ಶಾಸಕರು ರಾಜಸ್ಥಾನ ವಿಧಾನಸಭೆಯಲ್ಲೇ ವಾಸ್ತವ್ಯ ಹೂಡಿದರು.
ಗೋವಿಂದ್ ಸಿಂಗ್ ದೋಟಾಸ್ರಾ, ರಾಮ್ಕೇಶ್ ಮೀನಾ, ಅಮೀನ್ ಕಾಗ್ಜಿ, ಜಾಕಿರ್ ಹುಸೇನ್ ಗೆಸಾವತ್, ಹಕೀಮ್ ಅಲಿ ಖಾನ್ ಮತ್ತು ಸಂಜಯ್ ಕುಮಾರ್ ಜಾತವ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಅಮಾನತುಗೊಂಡ ಶಾಸಕರ ಜೊತೆಗೆ ಅವರ ಪಕ್ಷದ ಸಹೋದ್ಯೋಗಿಗಳು ಸಹ ವಿಧಾನಸಭೆಯಲ್ಲಿ ರಾತ್ರಿ ಕಳೆದರು. ವಿಶೇಷವೆಂದರೆ, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ದಸ್ತರಾ ಮತ್ತು ಮೀನಾ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿದ್ದಾರೆ. ಅಮಾನತುಗೊಂಡ ನಂತರ, ಶಾಸಕರು ಸ್ಪೀಕರ್ ನಿರ್ಧಾರದ ವಿರುದ್ಧ ಸದನದಲ್ಲಿ ಧರಣಿ ಪ್ರತಿಭಟನೆ ನಡೆಸಿದರು.
आज रात्रि, विधानसभा में ! जनहित की बुलंद आवाज़!
आपकी आवाज़ को दबाने की किसी भी कोशिश को नाकाम करेंगे, हर मुद्दे पर मजबूती से खड़े रहेंगे!#RajasthanVidhanSabha #जनताकीआवाज pic.twitter.com/2XVcYOvZJQ
— Zakir Hussain Gesawat – MLA🇮🇳 (@ZakirHussainINC) February 21, 2025
#कांग्रेस विधायको का सदन में रात्रि विश्राम…#Congress @KhabarRajastha @8PMnoCM pic.twitter.com/58wkpRKdgg
— Kamal Kumawat Journalist (@kamalkumawat71) February 22, 2025