BREAKING NEWS: ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ನವದೆಹಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಪವನ್ ಖೇರಾ, ಅಜಯ್ ಮಾಖೇನ್ ಅವರು ಸುದ್ದಿಗೋಷ್ಠಿಯಲ್ಲಿ ಪಟ್ಟಿ ಪ್ರಕಟಿಸಿದ್ದಾರೆ.

ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಲಿದೆ. ಕರ್ನಾಟಕ, ತೆಲಂಗಾಣದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಜಾರಿಗೊಳಿಸಿದ್ದೇವೆ ಎಂದು ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ನಮ್ಮ ಪಕ್ಷದ ಕಾರ್ಯಚಟುವಟಿಕೆ ಭರದಿಂದ ಸಾಗಿದೆ. ಕೇಂದ್ರೀಯ ಚುನಾವಣಾ ಸಮಿತಿ 39 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. 15 ಸಾಮಾನ್ಯ ವರ್ಗ, 24 ಮಂದಿ SC, ST, OBC ಅಲ್ಪಸಂಖ್ಯಾತರು.  12 ಮಂದಿ 50 ವರ್ಷದೊಳಗಿನವರಾಗಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ರಾಜ್ಯದ ಅಭ್ಯರ್ಥಿಗಳು:

ವಿಜಯಪುರ -ಎಸ್.ಆರ್. ಅಲಗೂರು,

ಹಾವೇರಿ –ಆನಂದ್ ಸ್ವಾಮಿ ಗಡ್ಡದೇವರಮಠ

ತುಮಕೂರು -ಮುದ್ದಹನುಮೇಗೌಡ

ಮಂಡ್ಯ –ವೆಂಕಟರಾಮೇಗೌಡ(ಸ್ಟಾರ್ ಚಂದ್ರು)

ಬೆಂಗಳೂರು ರೂರಲ್- ಡಿ.ಕೆ. ಸುರೇಶ್

ಶಿವಮೊಗ್ಗ -ಗೀತಾ ಶಿವರಾಜ್ ಕುಮಾರ್

ಹಾಸನ -ಶ್ರೇಯಸ್ ಪಟೇಲ್

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read