ಬೆಂಗಳೂರು : ಕಾಂಗ್ರೆಸ್ ಕೊಟ್ಟ ಡೋಂಗಿ ಗ್ಯಾರಂಟಿಗಳಿಗೆ ರಾಜ್ಯದ ಜನರೇ ಬೆಲೆ ತೆರಬೇಕಾಗಿ ಬಂದಿದೆ ಎಂದು ಬಿಜೆಪಿ ಟ್ವಿಟರ್ ನಲ್ಲಿ ವಾಗ್ಧಾಳಿ ನಡೆಸಿದೆ.
ರಾಜ್ಯದಲ್ಲಿ ಕರ್ನಾಟಕ ಕೊಟ್ಟ ಡೋಂಗಿ ಗ್ಯಾರಂಟಿಗಳಿಗೆ ರಾಜ್ಯದ ಜನರೇ ಬೆಲೆ ತೆರಬೇಕಾಗಿ ಬಂದಿದೆ. ಈಗ ಆಸ್ತಿ ಮಾರ್ಗಸೂಚಿ ದರ ಹೆಚ್ಚಿಸುವ ಹುನ್ನಾರದ ಮೂಲಕ ಮನೆ/ನಿವೇಶನ ಖರೀದಿಗೂ ಹೆಚ್ಚಿನ ಪ್ರಮಾಣದ ತೆರಿಗೆಯ ಬರೆ ಹಾಕಲು ಸಿದ್ದರಾಮಯ್ಯ ಸರ್ಕಾರ ಸಿದ್ಧವಾಗಿ ನಿಂತಿದೆ. ₹10ಕ್ಕಾಗಿ ₹100 ಕಳೆದುಕೊಳ್ಳುವ ಪರಿಸ್ಥಿತಿಗೆ ರಾಜ್ಯದ ಜನರನ್ನು ಸರ್ಕಾರ ತಳ್ಳಿದೆ ಎಂದು ಕಿಡಿಕಾರಿದೆ.
ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಕೈಗೊಂಬೆಯಾಗಿರುವ ರಾಜ್ಯ ಸರ್ಕಾರ ಪ್ರತಿಭಟನೆ ಎಂಬ ಬೃಹನ್ನಳೆನಾಟಕ ಪ್ರದರ್ಶನಕ್ಕೆ ಮುಂದಾಗಿದೆ ನಿಮ್ಮ ಉಚಿತ ಖಚಿತ ನಿಶ್ಚಿತ ಬಟಾಬಯಲಾಗಿದೆ! ನೀವು ಹೇಳಿದ ಗ್ಯಾರಂಟಿಗಳು ನಿಮ್ಮ ಸರ್ಕಾರದ್ದೋ ಅಥವಾ ಕೇಂದ್ರ ಸರ್ಕಾರದ್ದೋ? ಕಳೆದ ಬಾರಿ ಮೋದಿ ಸರ್ಕಾರದ ಅಕ್ಕಿಯನ್ನೇ ನಿಮ್ಮ ಖಾಲಿ ಚೀಲಕ್ಕೆ ಹಾಕಿ ಹಂಚುವಾಗ ಏಕೆ ಸತ್ಯ ತಿಳಿಸಿರಲಿಲ್ಲ? ವಿದ್ಯುತ್ ದರ ಏರಿಕೆಯ, ಉಚಿತ ಬಸ್ ಪ್ರಯಾಣದ ವೈಫಲ್ಯವನ್ನು ಬೇರೆಡೆಗೆ ತಳ್ಳಲು ಈ ನಾಟಕವೇ? ಸತ್ಯ ಯಾವಾಗಲು ಕಹಿಯೇ! ಸಬೂಬು ಹೇಳದೆ, ನಾಟಕ ಮಾಡದೆ ಮೋದಿ ಸರಕಾರ ಈಗಾಗಲೆ ಉಚಿತವಾಗಿ ಕೊಡುತ್ತಿರುವ 5 ಕಿಲೊ ಅಕ್ಕಿ ಬಿಟ್ಟು ತಮ್ಮ ‘ಗ್ಯಾರಂಟಿಯ’ 10 ಕಿಲೊ ಅಕ್ಕಿಯನ್ನು ರಾಜ್ಯಕ್ಕೆ ಕೊಡಬೇಕಾದ್ದು ಧರ್ಮ ಎಂದು ಬಿಜೆಪಿ ಟ್ವಿಟರ್ ನಲ್ಲಿ ವಾಗ್ಧಾಳಿ ನಡೆಸಿದೆ.
https://twitter.com/BJP4Karnataka/status/1671024392921563136?ref_src=twsrc%5Egoogle%7Ctwcamp%5Eserp%7Ctwgr%5Etweet
https://twitter.com/BJP4Karnataka/status/1671008187041083392?ref_src=twsrc%5Egoogle%7Ctwcamp%5Eserp%7Ctwgr%5Etweet