ಇಂದು ನಡೆದ ಭಾರೀ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಟೋ ಚಲಾಯಿಸಿದ್ದಾರೆ.
ತಮ್ಮ ಕ್ಷೇತ್ರ ಕನಕಪುರದಲ್ಲಿ ವೋಟಿಂಗ್ ಬಳಿಕ ಆಟೋ ಚಲಾಯಿಸುತ್ತಿದ್ದ ಅವರ ಪಕ್ಕ ಓರ್ವ ಮಹಿಳೆ ಕುಳಿತಿದ್ದರು.
ಪಕ್ಷದ ಕೆಲವು ಬೆಂಬಲಿಗರು ಮತ್ತು ಕಾರ್ಯಕರ್ತರು ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡರೆ, ಇನ್ನೂ ಹಲವರು ರಿಕ್ಷಾ ಜೊತೆಗೆ ಸಾಗಿದರು. ಕನಕಪುರದಲ್ಲಿ ಕಾಂಗ್ರೆಸ್ ನ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿಯ ಆರ್. ಅಶೋಕ್ ನಡುವೆ ನೇರ ಹಣಾಹಣಿ ಇದೆ.
ಕಳೆದ ವಾರ, ಶಿವಕುಮಾರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಮತ್ತು ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಪಕ್ಷವು ಏನು ನಿರ್ಧರಿಸುತ್ತದೆಯೋ ಅದಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದರು.
2023ರಲ್ಲಿ ಕರ್ನಾಟಕದಲ್ಲಿ ಮತ್ತು 2024ರಲ್ಲಿ ದೇಶದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.
https://twitter.com/INCKarnataka/status/1656199289243332610