ಅಧಿಕಾರದ ದುರಾಸೆಗೆ ಲಿಂಗಾಯತರನ್ನು ಬಳಸಿಕೊಂಡ ಕಾಂಗ್ರೆಸ್ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನ ಹಂಚಿಕೆ ವೇಳೆ ಮಾತ್ರ ಲಿಂಗಾಯತರ ಬಗ್ಗೆ ಮೌನಕ್ಕೆ ಜಾರಿದೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ವಿಜಯೇಂದ್ರ “ಲಿಂಗಾಯತರನ್ನು ಅಧಿಕಾರದ ದುರಾಸೆಗಾಗಿ ಅಸ್ತ್ರವನ್ನಾಗಿ ಬಳಸಿದ ನಂತರ, ಸಿಎಂ ಅಥವಾ ಡಿಸಿಎಂ ಆಫರ್ ಮಾಡಲು ಬಂದಾಗ ಕಾಂಗ್ರೆಸ್ ನಾಯಕರು ಇದ್ದಕ್ಕಿದ್ದಂತೆ ಮೌನವಾಗಿದ್ದಾರೆ. ವಿಪರ್ಯಾಸವೆಂದರೆ ಕಾಂಗ್ರೆಸ್‌ನಿಂದ ಗರಿಷ್ಠ 39 ಶಾಸಕರನ್ನು ಗೆದ್ದ ನಂತರ, ಲಿಂಗಾಯತರು ಸೂಕ್ತ ಸ್ಥಾನಗಳಿಗೆ ಬೇಡಿಕೆಯಿಡಲು ಬಲವಾದ ಧ್ವನಿಯಿಲ್ಲ” ಎಂದಿದ್ದಾರೆ.
“ಕಾಂಗ್ರೆಸ್‌ನ ನಿಜವಾದ ಮುಖವನ್ನು ಕಾಲ ಅನಾವರಣಗೊಳಿಸಿದೆ. ಲಿಂಗಾಯತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಕಾಂಗ್ರೆಸ್‌ನಿಂದ ಸಮಾಜಕ್ಕೆ ನಿಜವಾದ ನ್ಯಾಯ ಕೊಡಲು ಸಾಧ್ಯವೇ ಇಲ್ಲ. ಅಣ್ಣ ಬಸವಣ್ಣ ಮತ್ತು ಅವರ ಬೋಧನೆಗಳನ್ನು ನಿಜವಾಗಿಯೂ ಪ್ರತಿನಿಧಿಸುವ ಬಿಜೆಪಿ, ಅವರ ತತ್ವವನ್ನು ಅನುಸರಿಸುವ ಮೂಲಕ ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತಿದೆ” ಎಂದಿದ್ದಾರೆ.
https://twitter.com/BYVijayendra/status/1659461506516303873?ref_src=twsrc%5Etfw%7Ctwcamp%5Etweetembed%7Ctwterm%5E1659461506516303873%7Ctwgr%5E2eccc3c0807058b037fb4c53c1ec4133b022e4af%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fudayava8828429737477-epaper-dha10b31fd386b49ae86f59a0ada9416c1%2Fcongresscanneverdojusticetolingayatcommunitybyvijayendra-newsid-n501227478