‘ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ಜನ್ಮಗುಣ’ : ಬಿಜೆಪಿ ಟೀಕೆ

ಬೆಂಗಳೂರು : ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ಜನ್ಮಗುಣ ಎಂದು ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಅದರಲ್ಲಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ನವರ ಜನ್ಮಗುಣ!! ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನಿರಂತರವಾಗಿಅನ್ಯಾಯವೆಸಗುತ್ತಿರುವ ಕಾಂಗ್ರೆಸ್, ಈಗ ವಾಲ್ಮೀಕಿ ನಿಗಮದಲ್ಲಿ ನಡೆಸಿದ ಅಕ್ರಮದ ಹಣವನ್ನು ಬಾರ್ಗಳಿಗೆ ಕಳಿಸಿ ಅಲ್ಲಿಂದ ನಗದನ್ನು ವಿತ್ ಡ್ರಾ ಮಾಡಿಕೊಳ್ಳುವಷ್ಟರ ಮಟ್ಟಿಗೆ ಅನ್ಯಾಯದ ದಾರಿಯನ್ನು ತುಳಿದಿದೆ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಅಕ್ರಮಗಳಿಗೆಲ್ಲವೂ ಸಿಎಂ ಸಿದ್ದರಾಮಯ್ಯ ಅವರೇ ಪ್ರಮುಖ ಕಾರಣ. ವಾಲ್ಮೀಕಿ ಸಮುದಾಯಕ್ಕೆ ನಿಜಕ್ಕೂ ನ್ಯಾಯ ದೊರೆಯಬೇಕೆಂದರೆ ಮೊದಲು ಸಿದ್ದರಾಮಯ್ಯನವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಿಡಿಕಾರಿದೆ.

ಜಮೀರ್ ವಿರುದ್ಧ ಬಿಜೆಪಿ ಕಿಡಿ

ಸಮಾಜಘಾತುಕರಿಗೆ “ಶಕ್ತಿ” ತುಂಬಲು ಸದಾ “ಸಿದ್ದ”ಸರ್ಕಾರ. ರೌಡಿಗಳನ್ನು ಮಟ್ಟ ಹಾಕಿ ಅವರನ್ನು ಹೆಡೆಮುರಿ ಕಟ್ಟುವ ಬದಲು, ಅವರು ನಡುವೆ ಸಂಧಾನಕಾರರಾಗಿ ಹೋಗಿರುವುದು ಸಚಿವ ಸಚಿವ ಜಮೀರ್ ಅಹ್ಮದ್ ಸಂಧಾನ ನಡೆಸಿದ ಬೆನ್ನಲ್ಲೇ ರೌಡಿ ನಾಗರಾಜ್ ಕೊಲೆಯಾಗಿದೆ. ಸಿಎಂ ಸಿದ್ದರಾಮಯ್ಯರೇ, ಗೃಹ ಸಚಿವ ಪರಮೇಶ್ವರ್
ಅವರೇ, ಸಚಿವ ಜಮೀರ್ ಅಹಮದ್ ಸಂಧಾನಕಾರರಾಗಿ ಹೋಗಿದ್ದರೊ ಅಥವಾ ರೌಡಿ ನಾಗರಾಜ್ರನ್ನು ಮುಗಿಸಲು ಹೋಗಿದ್ದರೊ ಎಂಬ ಸತ್ಯಾಂಶವನ್ನು ತಿಳಿಸುವ ಜವಾಬ್ದಾರಿ ಸದ್ಯ ನಿಮ್ಮ ಮುಂದಿದೆ ಎಂದು ಬಿಜೆಪಿ ಕಿಡಿಕಾರಿದೆ.

https://twitter.com/BJP4Karnataka/status/1801855428210413620

https://twitter.com/BJP4Karnataka/status/1801879210900001154

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read