BREAKING: ಲೋಕಸಭೆ ಉಪ ನಾಯಕರಾಗಿ ಗೌರವ್ ಗೊಗೊಯ್, ಮುಖ್ಯ ಸಚೇತಕರಾಗಿ ಸುರೇಶ್ ನೇಮಿಸಿದ ಕಾಂಗ್ರೆಸ್

ನವದೆಹಲಿ: ಗೌರವ್ ಗೊಗೊಯ್ ಅವರನ್ನು ಲೋಕಸಭೆಯಲ್ಲಿ ಉಪ ನಾಯಕರನ್ನಾಗಿ ಕಾಂಗ್ರೆಸ್ ನೇಮಿಸಿದೆ. ಕೆ. ಸುರೇಶ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ

ಗೌರವ್ ಗೊಗೊಯ್ ಅವರನ್ನು ಲೋಕಸಭೆಯ ಉಪನಾಯಕರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಭಾನುವಾರ ಪ್ರಕಟಿಸಿದ್ದಾರೆ.

ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ಸಚೇತಕರ ನೇಮಕದ ಬಗ್ಗೆ ಗೌರವಾನ್ವಿತ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿ ಗೌರವ್ ಗೊಗೋಯ್, ಮುಖ್ಯ ಸಚೇತಕರಾಗಿ ಕೆ. ಸುರೇಶ್, ಸಚೇತಕರಾಗಿ ಮಾಣಿಕಂ ಟ್ಯಾಗೋರ್ ಮತ್ತು ಡಾ ಎಂ.ಡಿ. ಜವೈದ್ ಅವರನ್ನು ಪಕ್ಷ ನೇಮಿಸಿದೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪಕ್ಷಗಳು ಲೋಕಸಭೆಯಲ್ಲಿ ಜನರ ಸಮಸ್ಯೆಗಳಿಗೆ ಶಕ್ತಿಯುತವಾಗಿ ಹೋರಾಡುತ್ತವೆ ಎಂದು ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

https://twitter.com/kcvenugopalmp/status/1812375870096482721

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read