ಕಲಬುರಗಿ: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿವಿಯ ವಿದ್ಯಾರ್ಥಿನಿಯರನ್ನು ಪ್ರವಾಸಕ್ಕೆ ಕರೆದೊಯ್ದು ಹಿಜಾಬ್ ಧರಿಸುವಂತೆ ಒತ್ತಾಯ ಮಾಡಿದ ಆರೋಪ ಕೇಳಿ ಬಂದಿದೆ.
ಸಹ ಪ್ರಾಧ್ಯಾಪಕ ಅಬ್ದುಲ್ ಮಜೀದ್ ವಿರುದ್ಧ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೇಂದ್ರೀಯ ವಿವಿ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಪ್ರಾಧ್ಯಾಪಕ ಅಬ್ದುಲ್ ಮಜೀಬ್ ಅವರು ಕಲಬುರಗಿ, ಬೀದರ್ ಜಿಲ್ಲೆಯ ಹಲವು ಕಡೆ ಫೀಲ್ಡ್ ಟ್ರಿಪ್ ಗೆ ಕರೆದುಕೊಂಡು ಹೋಗಿದ್ದರು.
ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಹೆಚ್ಚು ಪ್ರವಾಸ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಹಿಜಾಬ್ ಧರಿಸುವಂತೆ ವಿದ್ಯಾರ್ಥಿನಿಯರಿಗೆ ಬಲವಂತ ಮಾಡಿದ್ದಾರೆ ಎನ್ನಲಾಗಿದೆ.
ಸಹಪ್ರಾಧ್ಯಾಪಕ ಅಬ್ದುಲ್ ಮಜೀದ್ ವಿರುದ್ಧ ಕಾನೂನು ಹಕ್ಕುಗಳ ರಕ್ಷಣಾ ವೇದಿಕೆ ದೂರು ನೀಡಿದೆ. ಕೇಂದ್ರೀಯ ವಿವಿ ವಿಸಿ ಪ್ರೊ. ಬಟ್ಟು ಸತ್ಯನಾರಾಯಣಗೆ ದೂರು ಸಲ್ಲಿಸಲಾಗಿದೆ.