ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಂದು ಹೊಸ ಜಾಗದಲ್ಲಿ ಎಸ್ ಐಟಿ ತಂಡ ಶೋಧಕಾರ್ಯ ಆರಂಭಿಸಿದೆ.
ಹೌದು, ರತ್ನಗಿರಿ ಬೆಟ್ಟದಲ್ಲಿ ದೂರುದಾರ ಹೊಸ ಸ್ಪಾಟ್ ತೋರಿಸಿದ್ದು, ಆ ಒಣ ಮರ ಇದೆಯಲ್ಲಾ..ಅಲ್ಲಿ ಶವ ಹೂತಿದ್ದೇನೆ..ಅಲ್ಲಿ ಶೋಧ ಕಾರ್ಯ ನಡೆಸಿ ಎಸ್ ಐ ಟಿ ಅಧಿಕಾರಿಗಳಿಗೆ ದೂರುದಾರ ಹೇಳಿದ್ದೇನೆ. ದೂರುದಾರ ತೋರಿಸಿದ ಹೊಸ ಸ್ಪಾಟ್ ನಲ್ಲಿ ಗುರುತು ಮಾಡಲಾಗಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ.
ದೂರುದಾರ ತೋರಿಸಿರುವ ಜಾಗ ಧರ್ಮಸ್ಥಳದ ಬಾಹುಬಲಿ ಮೂರ್ತಿ ಇರುವ ರತ್ನಗಿರಿ ಬೆಟ್ಟದ ತಪ್ಪಲಿನಲ್ಲಿ 16ನೇ ಪಾಯಿಂಟ್ ಎಂದು ಗುರುತಿಸಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ.