BIG NEWS : ರಾಜ್ಯದಲ್ಲಿ ‘ಅನುಕಂಪದ ಆಧಾರದ ಮೇಲೆ ನೇಮಕಾತಿ’ : ಸರ್ಕಾರದಿಂದ ಮಹತ್ವದ ಆದೇಶ |Govt Employee

ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಉಮೇಶ್ ಕುಮಾರ್ ನಾಗಪಾಲ್ ವಿರುದ್ಧ ಹರಿಯಾಣ ರಾಜ್ಯ ಮತ್ತು ಇತರರು (1994) 4 SCC 138) ಪ್ರಕರಣದಲ್ಲಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಸರ್ಕಾರ ದಿನಾಂಕ: 12.09.1996 ರ ಉಲ್ಲೇಖ (1) ರ ಅಧಿಸೂಚನೆಯಲ್ಲಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ನ್ನು ರಚಿಸಿದ್ದು ಈ ನಿಯಮಗಳು ದಿನಾಂಕ 13.09.1996 ರಿಂದ ಜಾರಿಗೆ ಬಂದಿರುತ್ತವೆ. ಈ ನಿಯಮಗಳನ್ನು ಕಾಲ ಕಾಲಕ್ಕೆ ತಿದ್ದುಪಡಿ ಮಾಡಲಾಗಿರುತ್ತದೆ. ದಿನಾಂಕ 09.04.2021 ರ ಉಲ್ಲೇಖ (2) ರ ಅಧಿಸೂಚನೆಯಲ್ಲಿ 1996 ರ ಸದರಿ ನಿಯಮಗಳಿಗೆ ವ್ಯಾಪಕವಾದ ತಿದ್ದುಪಡಿಗಳನ್ನು ಮಾಡಲಾಗಿರುತ್ತದೆ. ಈ ನಿಯಮಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ದಿನಾಂಕ 12.11.2024 ರ ಉಲ್ಲೇಖ (3) ರ ಸುತ್ತೋಲೆಯಲ್ಲಿ ಮತ್ತು ದಿನಾಂಕ 13.01.2025 ರ ಉಲ್ಲೇಖ (4) ರ ಸುತ್ತೋಲೆಯಲ್ಲಿ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ.

  1. ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತನಾದಾಗ, ಆತನ ಅವಲಂಬಿತರು ಅನುಕಂಪದ ಆಧಾರದ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದಾಗ, ಅಂತಹ ಅರ್ಜಿಗಳನ್ನು ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 202187/2023 (ಎಸ್ ಕೆಎಟಿ) – ರಾಜ್ಯ ಸರ್ಕಾರ ವಿರುದ್ಧ ಶ್ರೀ ಮೆಹಬೂಬ್ ಪಟೇಲ್ ಪ್ರಕರಣದಲ್ಲಿ ದಿನಾಂಕ 25.07.2025 ರಂದು ನೀಡಿರುವ ತನ್ನ ಆದೇಶದಲ್ಲಿ ಈ ಕೆಳಕಂಡಂತೆ ನಿರ್ದೇಶನಗಳನ್ನು ನೀಡಿರುತ್ತದೆ:
    “22. Compassionate appointment matters being a welfare measure designed to provide immediate financial relief to bereaved families, the State bears a high duty of procedural fairness. When a timely application is made, especially by an illiterate or a widow, the authorities must act strictly, transparently and assistively Failure to do so, can deny rightful dependants their opportunity
  2. In order to prevent recurrence of such situation and to bring clarity, transparency and procedural fairness into the compassionate appointment process, we issue the following directions
    i) Every application for compassionate appointment whether in prescribed format or not must be acknowledged in writing by the authority within 30 days along with clear communication about
    a) status of the application (incomplete or complete),
    b) any defects in format/documentation;
    c) the rights of other dependants to apply,
    d) The applicable limitation period,
    ii) In cases where the applicant is widow, illiterate or otherwise, concerned Departments must take pro-active steps to assist them in filing the application in proper format and guide them regarding the steps to be followed by the other dependants to apply;
    iii) All the applications must be decided within a maximum period of 90 days from the date of receipt of the application. If the application is found not maintainable, a reasoned order must be communicated to the applicant immediately.
    iv) A uniform Standard Operating Procedure (SOP) and training of officials handling compassionate appointment should be made by the Government to ensure no procedural lapses.
    The State Government shall issue appropriate instructions to all the Heads of Departments to ensure that application for compassionate appointment are decided within the time frame stated supra.”
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read