ಬ್ಯಾಂಕ್ ಗೆ 149 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಪರಾರಿಯಾಗಿದ್ದ ಕಂಪನಿ ಅಧ್ಯಕ್ಷ ಅರೆಸ್ಟ್

ಮುಂಬೈ: ಬ್ಯಾಂಕ್‌ ಗೆ ವಂಚಿಸಿ 149.89 ರೂಪಾಯಿ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಅಸೋಸಿಯೇಟ್ ಹೈ ಪ್ರೆಶರ್ ಟೆಕ್ನಾಲಜೀಸ್‌ನ ಅಧ್ಯಕ್ಷ ಮನೋಹರಲಾಲ್ ಸತ್ರಮ್‌ ದಾಸ್ ಅಗಿಚಾ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ಬಂಧಿಸಿದೆ.

2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯ ನಿಬಂಧನೆಗಳ ಅಡಿಯಲ್ಲಿ ಉದ್ಯಮಿಯನ್ನು ಬಂಧಿಸಲಾಯಿತು. ನಂತರ, ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಅವರನ್ನು 3 ದಿನಗಳ ಇಡಿ ಕಸ್ಟಡಿಗೆ ಕಳುಹಿಸಲು ಆದೇಶಿಸಿತು.

ತನಿಖೆಯ ಸಂದರ್ಭದಲ್ಲಿ ಅಗಿಚಾ ಅವರು ಓಡಿಹೋಗಿದ್ದರು ಮತ್ತು ಹಲವಾರು ಸಮನ್ಸ್‌ಗಳ ಹೊರತಾಗಿಯೂ ಇಡಿ ಮುಂದೆ ಹಾಜರಾಗಲು ವಿಫಲರಾಗಿದ್ದರು, ಇದು ತನಿಖೆಯ ಪ್ರಗತಿಗೆ ಅಡ್ಡಿಯಾಯಿತು.

ಫೋನ್ ಮತ್ತು ಸಿಮ್ ಕಾರ್ಡ್‌ಗಳನ್ನು ಸಕ್ರಿಯವಾಗಿ ಬದಲಾಯಿಸುತ್ತಿದ್ದ ಮನೋಹರಲಾಲ್ ಪತ್ತೆಗೆ ಗುಪ್ತಚರ ಪ್ರಯತ್ನಗಳು ನಡೆದು ಅಂತಿಮವಾಗಿ, ಶುಕ್ರವಾರ, ಕ್ರಿಮಿನಲ್ ಮೊಕದ್ದಮೆಗಳಿಂದ ತಪ್ಪಿಸಿಕೊಳ್ಳಲು ಅವರು ಅಡಗಿಕೊಂಡಿದ್ದ ಪುಣೆಯ ವಸತಿ ಆವರಣವನ್ನು ಶೋಧಿಸಿ ಆರೋಪಿಯನ್ನು ಬಂಧಿಸಲಾಯಿತು.

ಕಂಪನಿ ಮತ್ತು ಅದರ ನಿರ್ದೇಶಕರು ಮತ್ತು ಷೇರುದಾರರ ವಿರುದ್ಧ ಕೇಂದ್ರೀಯ ತನಿಖಾ ದಳ(ಸಿಬಿಐ) ದಾಖಲಿಸಿದ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ಆಧರಿಸಿ ಕೇಂದ್ರ ತನಿಖಾ ಸಂಸ್ಥೆ ತನಿಖೆ ಆರಂಭಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read