ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ(COMEDK) COMED-K ಪದವಿಪೂರ್ವ ಪ್ರವೇಶ ಪರೀಕ್ಷೆ 2025 (UGET) 2025 ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಮೆಡ್- ಕೆ UGET 2025 ಕೌನ್ಸೆಲಿಂಗ್ ನೋಂದಣಿಯನ್ನು ಅಧಿಕೃತ ವೆಬ್ಸೈಟ್ comedk.org ಮೂಲಕ ಆನ್ಲೈನ್ನಲ್ಲಿ ಮಾಡಬಹುದು. ನೋಂದಣಿ ಪ್ರಕ್ರಿಯೆಯು ಜೂನ್ 9 ರಂದು ಪ್ರಾರಂಭವಾಗುತ್ತದೆ ಮತ್ತು ಜೂನ್ 18 ರಂದು ಮುಕ್ತಾಯಗೊಳ್ಳುತ್ತದೆ.
COMEDK UGET ಪರೀಕ್ಷೆ 2025 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಕರ್ನಾಟಕದ ಪದವಿಪೂರ್ವ ಎಂಜಿನಿಯರಿಂಗ್ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳ ಹಂಚಿಕೆಯು ಪರೀಕ್ಷೆಯಲ್ಲಿನ ಅರ್ಹತೆ, ಅಭ್ಯರ್ಥಿಗಳು ಭರ್ತಿ ಮಾಡಿದ ಆಯ್ಕೆಗಳು ಮತ್ತು ಸೀಟುಗಳ ಲಭ್ಯತೆಯನ್ನು ಆಧರಿಸಿರುತ್ತದೆ.
COMEDK UGET ಫಲಿತಾಂಶವನ್ನು ಜೂನ್ 7, 2025 ರಂದು ಪ್ರಕಟಿಸಲಾಯಿತು.
ಕೌನ್ಸೆಲಿಂಗ್ 2025 ನೋಂದಣಿ ಮತ್ತು ದಾಖಲೆ ಅಪ್ಲೋಡ್ ಕೊನೆಯ ದಿನಾಂಕ ಜೂನ್ 18, 2025
ಕೌನ್ಸೆಲಿಂಗ್ ಅನ್ನು ಮೂರು ಸುತ್ತುಗಳಲ್ಲಿ ನಡೆಸಲಾಗುತ್ತದೆ. ಸುತ್ತಿನ 2 ಮತ್ತು 3 ರಲ್ಲಿ ಭಾಗವಹಿಸುವ ಅಭ್ಯರ್ಥಿಯ ಅರ್ಹತೆಯು ಹಿಂದಿನ ಸುತ್ತುಗಳಲ್ಲಿ ಸೀಟು ಹಂಚಿಕೆಗಾಗಿ ಮಾಡಿದ ಆಯ್ಕೆಯನ್ನು ಅವಲಂಬಿಸಿರುತ್ತದೆ. ಹೆಚ್ಚುವರಿಯಾಗಿ, ಪ್ರಸ್ತುತ ವರ್ಷದಲ್ಲಿ ಪ್ರಿ ಯೂನಿವರ್ಸಿಟಿ ಕೋರ್ಸ್(ಪಿಯುಸಿ) ಬೋರ್ಡ್ ಅಥವಾ 12 ನೇ ತರಗತಿಯ ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ವಿಶೇಷ ಕೌನ್ಸೆಲಿಂಗ್ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು,
ಜೂನ್ ಮೂರನೇ ವಾರ ದಾಖಲೆ ಪರಿಶೀಲನೆ, ಸುತ್ತು 1 ಆಯ್ಕೆ ಭರ್ತಿ ಜುಲೈ ಮೊದಲ ವಾರ, ಅಣಕು ಸೀಟು ಹಂಚಿಕೆ ಬಿಡುಗಡೆ ಜುಲೈ ಮೊದಲ ವಾರ ನಡೆಯಲಿದೆ ಎಂದು ಹೇಳಲಾಗಿದೆ.